ಚಂದ್ರಯಾನ 3 ಯಶಸ್ಸಿಗಾಗಿ ದಾವಣಗೆರೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ: ವಿಡಿಯೋ

By ETV Bharat Karnataka Team

Published : Aug 23, 2023, 1:12 PM IST

thumbnail

ದಾವಣಗೆರೆ: ಚಂದ್ರಯಾನ 3 ಯೋಜನೆಯ ವಿಕ್ರಮ್‌ ಲ್ಯಾಂಡರ್ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವ ಕಾತರದಿಂದ ಕಾಯುತ್ತಿದೆ. ಈ ನಡುವೆ ಚಂದ್ರಯಾನ 3 ಯಶಸ್ವಿಯಾಗಿ ದಾವಣಗೆರೆಯ ನಗರದ ಶ್ರೀದೇವಿ ತಿಮ್ಮರೆಡ್ಡಿ ಪಬ್ಲಿಕ್ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ದೇವರ ಮೊರೆ ಹೋಗಿದ್ದಾರೆ.

ಶಾಮನೂರು ಅಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಕ್ಕಳು ಹಾಗೂ ಶಿಕ್ಷಕರು ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಸ್ಥಳೀಯರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಇದಲ್ಲದೇ ಚಂದ್ರಯಾನ 3 ಯಶಸ್ವಿಗಾಗಿ ಶಾಲೆಯ ವತಿಯಿಂದ ಇಡೀ ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೂ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. 'ಅಲ್ ದಿ ಬೆಸ್ಟ್ ಇಸ್ರೋ ಸಹಿ ಸಂಗ್ರಹ, ಸೆಲ್ಫಿ ವಿತ್ ಚಂದ್ರಯಾನ 3, ಚಂದ್ರಯಾನ-3 ಲ್ಯಾಂಡಿಂಗ್ ವೀಕ್ಷಣೆಗೆ ವ್ಯವಸ್ಥೆ' ಹೀಗೆ ನಾನಾ ಕಾರ್ಯಕ್ರಮಗಳನ್ನು ಶಾಲಾ ಅಡಳಿತ ಮಂಡಳಿ ಹಮ್ಮಿಕೊಂಡಿದೆ.‌ 

ಚಂದ್ರಯಾನ-3ರ ಲ್ಯಾಂಡಿಂಗ್ ಭಾರತಕ್ಕೆ ಐತಿಹಾಸಿಕ ಮೈಲಿಗಲ್ಲು ಎಂದು ಇಸ್ರೋ ವಿಜ್ಞಾನಿಗಳು ಬಣ್ಣಿಸಿದ್ದಾರೆ. ವಿಶ್ವ ಹಾಗೂ ದೇಶದ ಜನ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.  

ಇದನ್ನೂ ಓದಿ: Chandrayaan-3 : ಚಂದ್ರಯಾನ 3 ಸಕ್ಸಸ್​ಗಾಗಿ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ವಿಶೇಷ ಪೂಜೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.