Smoke in Train: ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್ ರೈಲಿನಲ್ಲಿ ದಟ್ಟ ಹೊಗೆ...ಆತಂಕಗೊಂಡ ಪ್ರಯಾಣಿಕರು - ಎಸ್2 ಬೋಗಿಯಲ್ಲಿ ಹೊಗೆ
🎬 Watch Now: Feature Video
ದರ್ಭಾಂಗಾ (ಬಿಹಾರ): ಬಿಹಾರ ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್ ರೈಲಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ನಡೆದಿದೆ. ಏಕಾಏಕಿ ಹೊಗೆಯಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಅಲ್ಲದೇ, ತಕ್ಷಣವೇ ಚಾಲಕ ರೈಲು ನಿಲ್ಲಿಸಿದ್ದಾನೆ. ಬಳಿಕ ಹೊಗೆ ನಿಯಂತ್ರಿಸಿದ 15 ನಿಮಿಷದ ಬಳಿಕ ರೈಲು ಮತ್ತೆ ತನ್ನ ಸಂಚಾರ ಆರಂಭಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯಿಂದ ದರ್ಭಾಂಗಾ ಜಿಲ್ಲೆಗೆ ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್ ರೈಲು ಪ್ರಯಾಣಿಸುತ್ತಿತ್ತು. ಈ ವೇಳೆ, ತಳವಾರ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಎಸ್2 ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿ ರೈಲಿನಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡರು. ವಿಷಯ ತಿಳಿದ ಕೂಡಲೇ ರೈಲಿನ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾನೆ.
ಜೊತೆಗೆ ಹೊಗೆಯಿಂದ ಆಘಾತಗೊಂಡ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ಓಡಿ ಬಂದಿದ್ದಾರೆ. ನಂತರ ರೈಲ್ವೆ ಅಧಿಕಾರಿಗಳ ಪರಿಶೀಲನೆ ವೇಳೆ ಬ್ರೇಕ್ ವೈಂಡಿಂಗ್‌ನಿಂದ ಹೊಗೆ ಬರುತ್ತಿರುವುದು ಪತ್ತೆಯಾಗಿದೆ. ಹೊಗೆ ನಿಯಂತ್ರಿಸಿದ ಬಳಿಕ ರೈಲು ತನ್ನ ಸಂಚಾರವನ್ನು ಆರಂಭಿಸಿದೆ. ಈ ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ ಎಂದು ಸಮಸ್ತಿಪುರ ರೈಲ್ವೆ ವಿಭಾಗ ಡಿಆರ್ಎಂ ಅಲೋಕ್ ಅಗರ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು - ಹೌರಾ ದುರಂತೋ ಎಕ್ಸ್ಪ್ರೆಸ್ ರೈಲಿನಲ್ಲಿ ದಟ್ಟ ಹೊಗೆ.. ವಿಡಿಯೋ