ಜಲಂಧರ್ಗೆ ಭೇಟಿ ನೀಡುತ್ತಿರುವ ಪಂಜಾಬ್, ದೆಹಲಿ ಸಿಎಂಗಳಿಗೆ ಖಲಿಸ್ತಾನ್ ಎಚ್ಚರಿಕೆ! - ಪಂಜಾಬ್ ಅಪರಾಧ ಸುದ್ದಿ
🎬 Watch Now: Feature Video

ಜಲಂಧರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಜಲಂಧರ್ಗೆ ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೂ ಮುನ್ನ ಕೆಲ ಕಿಡಿಗೇಡಿಗಳು ಜಲಂಧರ್‌ನ ಶ್ರೀ ದೇವಿ ತಲಾಬ್ ಮಂದಿರದ ಬಳಿಯ ಗೋಡೆಗಳ ಮೇಲೆ ಖಲಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಬರೆದಿರುವುದು ಅಚ್ಚರಿ ಮೂಡಿಸಿದೆ. ಹೀಗಾಗಿ ಈ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಹಲವಾರು ಮಾರ್ಗಗಳನ್ನು ಬದಲಾಯಿಸಲಾಗಿದೆ ಮತ್ತು ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
Last Updated : Feb 3, 2023, 8:23 PM IST