ಸೇಡಂನಲ್ಲಿ ಸಚಿವ ಅಶೋಕ್ ಗ್ರಾಮ ವಾಸ್ತವ್ಯ: ಗಾಯಕಿ ಮಂಗ್ಲಿ ಹಾಡಿಗೆ ಪ್ರೇಕ್ಷಕರು ಖುಷ್ - Singer Mangli program

🎬 Watch Now: Feature Video

thumbnail

By

Published : Aug 21, 2022, 1:35 PM IST

Updated : Feb 3, 2023, 8:27 PM IST

ಕಲಬುರಗಿ: ಕಂದಾಯ ಸಚಿವ ಆರ್.ಅಶೋಕ್ ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಹೂಡಿದ್ದರು. ಖ್ಯಾತ ಗಾಯಕಿ ಮಂಗ್ಲಿ ಸೇರಿದಂತೆ ಅನೇಕ ಕಲಾವಿದರಿಂದ ಈ ವೇಳೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಜರುಗಿದವು. ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವ, ಪತ್ರಕರ್ತ ಗೋಪಾಲ ಕುಲಕರ್ಣಿ ಕೂಡಾ ಹಾಡುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಅವರ ಧರ್ಮಪತ್ನಿ ಸಂತೋಷಿರಾಣಿ ಪಾಟೀಲ ಅವರು ನಟ ಪುನಿತ್ ರಾಜ್​​ಕುಮಾರ ಅಭಿನಯದ 'ರಾಜಕುಮಾರ' ಚಿತ್ರದ ಬೊಂಬೆ ಹೇಳುತೈತೆ ಹಾಡು ಹಾಡಿ ಅಗಲಿದ ಅಪ್ಪುವಿಗೆ ಗೌರವ ಸಮರ್ಪಿಸಿದರು. ಗಾಯಕಿ ಮಂಗ್ಲಿ ಹಾಡುಗಳಿಗೆ ಸ್ಥಳೀಯರು, ಮಕ್ಕಳು ಕುಣಿದು ಖುಷಿಪಟ್ಟರು.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.