ಸಿದ್ದರಾಮಯ್ಯ ಹೆಸರಿನ ಹೇರ್ಸ್ಟೈಲ್ ಮಾಡಿಸಿಕೊಂಡ ಅಭಿಮಾನಿ - ಸಿದ್ದರಾಮಯ್ಯ ಹೆಸರಿನ ಹೇರ್ಕಟ್
🎬 Watch Now: Feature Video
ಮೈಸೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಗೆಲುವಿನ ನಂತರ ರಾಜ್ಷ ಸೇರಿದಂತೆ ದೆಹಲಿಯ ಕಾಂಗ್ರೆಸ್ ಕಚೇರಿಗಳ ಎದರು ಕಾರ್ಯಕರ್ತರು ಸಂಭ್ರಮಿಸತೊಡಗಿದ್ದಾರೆ.
ಅದರಲ್ಲು ವರುಣಾ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಗೆಲುವು ದಾಖಲಿಸಿರುವ ಹಿನ್ನೆಲೆ ಅವರ ಅಭಿಮಾನಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟೆ ಅಲ್ಲದೇ ಅವರ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಅವರ ಹೆಸರು ಹಾಗೂ ಹಸ್ತ ಗುರುತಿನ ಹೇರ್ಕಟ್ ಸಹ ಮಾಡಿಸಿಕೊಂಡಿದ್ದಾರೆ.
ವರುಣ ಕ್ಷೇತ್ರದ ರಾಯನಹುಂಡಿ ಗ್ರಾಮದ ಚಂದ್ರು ಎನ್ನುವವರು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಚಿಹ್ನೆಯ ಕಟ್ಟಿಂಗ್ ಮಾಡಿಸಿಕೊಂಡಿದ್ದಾರೆ. ರಾಮಕೃಷ್ಣನಗರದಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ ಅಭಿಮಾನಿ ಚಂದ್ರು, ತಮ್ಮ ಹೇರ್ಸ್ಟೈಲ್ ಅನ್ನು ಸಿದ್ದರಾಮಯ್ಯರಿಗೆ ತೋರಿಸಲು ಬಂದಿದ್ದರು.
ಆದರೆ, ಸಾಕಷ್ಟು ಜನ ಮತ್ತು ಕಾರ್ಯಕರ್ತರು ಸಿದ್ದರಾಮಯ್ಯರನ್ನ ಭೇಟಿ ಮಾಡಲು ಮನೆ ಮುಂದೆ ಜಮಾಯಿಸಿದ್ದಾರೆ. ಈ ಹಿನ್ನೆಲೆ ಈ ಅಭಿಮಾನಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ ಅವಕಾಶ ದೊರೆಯಲಿಲ್ಲ. ಚಂದ್ರು ಅವರ ಹೇರ್ಕಟ್ ವಿಡಿಯೋ ವಾಟ್ಸ್ಆ್ಯಪ್ ಸ್ಟೇಟಸ್ಗಳಲ್ಲಿ ಹರಿದಾಡಿವೆ.
ಇದನ್ನೂ ಓದಿ: ಎದೆ ಮೇಲೆ 'ಸಿದ್ದರಾಮಯ್ಯ ಸಿಎಂ' ಎಂದು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ: ವಿಡಿಯೋ