ಸಿದ್ದರಾಮಯ್ಯ ಭೇಟಿ ಮಾಡಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ.. ವಿವಾದದ ಕುರಿತು ಚರ್ಚೆ - Etv Bharat Karnataka
🎬 Watch Now: Feature Video
ಬೆಂಗಳೂರು: ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮ ಆಪ್ತ ಪ.ಮಲ್ಲೇಶ್, ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಮಾತನಾಡಿದ ಹಿನ್ನೆಲೆ ಉಂಟಾಗಿರುವ ವಿವಾದ ತಣ್ಣಗಾಗಿಸುವ ಸಲುವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಇಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಭೇಟಿಯಾಗಿ ಚರ್ಚಿಸಿದರು. ಶಿವಾನಂದ ವೃತ್ತದ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಅಶೋಕ್ ಹಾರ್ನಳ್ಳಿ ಭೇಟಿ ಮಾಡಿ ಚರ್ಚಿಸಿದರು. ತಮಗೆ ಯಾವುದೇ ಸಮುದಾಯದ ವಿರುದ್ಧ ಮುನಿಸಿಲ್ಲ, ಮಲ್ಲೇಶ ಮಾತನಾಡಿರುವ ಬಗ್ಗೆ ಗೊತ್ತಿಲ್ಲ.ಆದರೆ ಮಲ್ಲೇಶ ತಾವು ಹಾಗೆ ಮಾತನಾಡಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸುವುದು ಉತ್ತಮ ಎಂದು ಮನವಿ ಮಾಡಿದರು.
Last Updated : Feb 3, 2023, 8:33 PM IST