ಕಾರಿನಲ್ಲಿ ಕೂರುವ ವೇಳೆ ಸ್ಲಿಪ್ ಆದ ಸಿದ್ದರಾಮಯ್ಯ: ನೀರು ಕೊಟ್ಟು ಆರೈಕೆ ಮಾಡಿದ ಸಹಾಯಕ - ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡ ಸಿದ್ದರಾಮಯ್ಯ
🎬 Watch Now: Feature Video
ವಿಜಯನಗರ: ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲಿ ಕುಳಿತುಕೊಳ್ಳುವ ವೇಳೆ ಆಯ ತಪ್ಪಿ ಬಿದ್ದಿದ್ದು, ಅಂಗರಕ್ಷಕರು ಆರೈಕೆ ಮಾಡಿದ ಘಟನೆ ನಡೆದಿದೆ.
ಹೆಲಿಕಾಪ್ಟರ್ನಲ್ಲಿ ಕೂಡ್ಲಿಗಿ ಹೊರ ವಲಯದ ಹೆಲಿಪ್ಯಾಡ್ಗೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ನಿಂದ ಇಳಿದು ಕಾರಿನಲ್ಲಿ ಏರಿ ಕುಳಿತುಕೊಳ್ಳುವಾಗ ಆಯ ತಪ್ಪಿ ಕುಸಿದರು. ಈ ವೇಳೆ ಪಕ್ಕದಲ್ಲೇ ಇದ್ದ ಅಂಗರಕ್ಷಕರು ತಕ್ಷಣ ಕೈಹಿಡಿದು ಮೇಲಕ್ಕೆತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಹಾಯಕ ಅವರಿಗೆ ನೀರು ಕೊಟ್ಟು ಸುಧಾರಿಸಿಕೊಳ್ಳುವಂತೆ ಮಾಡಿದ್ದಾರೆ. ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡ ಸಿದ್ದರಾಮಯ್ಯ ಅವರು ನಂತರ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇವೆ. ತಮ್ಮ ಪರ ಜೊತೆಗೆ ತಮ್ಮ ಪಕ್ಷದ ಇತರ ಅಭ್ಯರ್ಥಿಗಳ ಪರವೂ ಪಕ್ಷದ ಪ್ರಮುಖ ನಾಯಕರು ಭರದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಬಿಡುವಿಲ್ಲದೇ ಒಂದಾದ ಮೇಲೆ ಒಂದು ಕ್ಷೇತ್ರದಲ್ಲಿ ತಮ್ಮ ಆಯಾಸವನ್ನೂ ಲೆಕ್ಕಿಸದೇ ನಾಯಕರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ನೋಡಿ: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಭರ್ಜರಿ ಮತ ಬೇಟೆ