ಸಿದ್ದು ಪ್ರಮಾಣ ವಚನಕ್ಕೆ ಕ್ಷಣಗಣನೆ: ಅಭಿಮಾನಿಗಳಿಂದ ಚಾಮರಾಜೇಶ್ವರನಿಗೆ ಕ್ಷೀರಾಭೀಷೇಕ - Congress is in full majority
🎬 Watch Now: Feature Video
ಚಾಮರಾಜನಗರ : ಎರಡನೇ ಬಾರಿ ಮುಖ್ಯಮಂತ್ರಿ ಗಾದಿಗೇರುತ್ತಿರುವ ಸಿದ್ದರಾಮಯ್ಯ ಅವರಿಗೆ ಶುಭವಾಗಲಿ ಎಂದು ಚಾಮರಾಜನಗರದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎರಡನೇ ಬಾರಿಗೆ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ಸಿದ್ದರಾಮಯ್ಯ ಅಭಿಮಾನಿ ಬಳಗವು ಚಾಮರಾಜೇಶ್ವರನಿಗೆ ಕ್ಷೀರಾಭೀಷೇಕ, ಬಿಲ್ವಾರ್ಚನೆ ಮಾಡಿಸಿ ಸಿದ್ದರಾಮಯ್ಯಗೆ ಶುಭ ಹಾರೈಸಿದ್ದಾರೆ.
ಚಾಮರಾಜನಗರದ ಮೇಲೆ ಸಾಕಷ್ಟು ವಿಶ್ವಾಸ, ಪ್ರೀತಿ ಹೊಂದಿರುವ ಸಿದ್ದರಾಮಯ್ಯಗೆ ಜಿಲ್ಲೆಯಲ್ಲಿ ಅಪಾರ ಬೆಂಬಲಿಗರಿದ್ದಾರೆ. ಸಿದ್ದು ಸಿಎಂ ಆಗಿದ್ದ ವೇಳೆ ಮೌಢ್ಯಕ್ಕೆ ಅಂಟಿಕೊಳ್ಳದೇ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಅನುದಾನದ ಹೊಳೆಯನ್ನೇ ಹರಿಸಿದ್ದರು.
ರಾಯಚೂರಿನಲ್ಲೂ ನಂದಿಶ್ವೇರ ದೇವಸ್ಥಾನದ ಬಳಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲುಮತ ಸಮುದಾಯದ ಮುಖಂಡರು ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಮಾತನಾಡಿರುವ ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ನಾಳೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಸಿದ್ಧರಾಮಯ್ಯ ಅವರು 2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದು ಸಮಾಜಕ್ಕೆ ಹೆಮ್ಮ ವಿಷಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಹಾಲುಮತ ಸಮಾಜದ ಮುಖಂಡರಿಂದ ಸಿದ್ದರಾಮಯ್ಯ ಭಾವಚಿತ್ರಕ್ಕೆ ಕ್ಷೀರಾಭಿಷೇಕ: ವಿಡಿಯೋ