ಸಿದ್ಧರಾಮಯ್ಯ ಅಭಿಮಾನಿಯಿಂದ ದೀಡ ನಮಸ್ಕಾರ: ವಿಡಿಯೋ - ಗದಗ
🎬 Watch Now: Feature Video
ಗದಗ: ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿ ಅಭಿಮಾನಿಯೊಬ್ಬರು ದೀಡ ನಮಸ್ಕಾರ ಹಾಕಿದ್ದಾರೆ. ಹನುಮಂತ ಜಟ್ಟಿ ಹರಕೆ ಹೊತ್ತವರು. ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ನರಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ ಅವರ ಅಭಿಮಾನಿಯಾದ ಹನುಮಂತ ಜಟ್ಟಿ ಅವರು ಒಂದು ಕ್ವಿಂಟಲ್ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತು ವಿರೂಪಾಕ್ಷ ದೇವಸ್ಥಾನದಿಂದ ಮಾರುತೇಶ್ವರ ದೇವಸ್ಥಾನದವರೆಗೆ ಸುಮಾರು ಅರ್ಧ ಕಿ.ಮೀಟರ್ ವರೆಗೂ ಹೆಚ್ಚು ದೂರ ದೀಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಈ ಸಂಸದನ ಹ್ಯಾಟ್ರಿಕ್ ಗೆಲುವಿಗಾಗಿ ಅಭಿಮಾನಿಗಳ ದೀಡ ನಮಸ್ಕಾರ
ರಾಜ್ಯಕ್ಕೆ ಸಿದ್ಧರಾಮಯ್ಯ ಮುಖ್ಯಂತ್ರಿ ಆಗಬೇಕು ಹಾಗೂ ನರಗುಂದ ಕ್ಷೇತ್ರಕ್ಕೆ ಬಿ.ಆರ್.ಯಾವಗಲ್ ಎಂಎಲ್ಎ ಆಗಬೇಕು. ಜತೆಗೆ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬುವುದು ಹನುಮಂತ ಅವರ ಒತ್ತಾಸೆಯಂತೆ. ಇನ್ನು ಇತ್ತೀಚೆಗೆ ದಾವಣಗೆರೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ವೀರಭದ್ರೇಶ್ವರ ಸನ್ನಿಧಿಯಲ್ಲಿ ಬೆಂಕಿ ಕೆಂಡ ತುಳಿದು ಭಕ್ತಿ ಸಮರ್ಪಿಸಿದ್ದರು.
ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಎಸ್ ಎಸ್ ಮಲ್ಲಿಕಾರ್ಜುನ್