ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ: ಕಾಂಗ್ರೆಸ್​​ ಪಕ್ಷದ ಶಾಸಕಾಂಗ ಸಭೆಗೆ ಕ್ಷಣಗಣನೆ! - etv bharat kannadas

🎬 Watch Now: Feature Video

thumbnail

By

Published : May 18, 2023, 7:44 PM IST

ಬೆಂಗಳೂರು: ಕರುನಾಡಿಗೆ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕೊನೆಗೂ ಮುಗಿದಿದ್ದು, ರಾಜ್ಯದಲ್ಲಿ ರಚನೆಯಾಗಲಿರುವ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಆಯ್ಕೆಯಾಗಿದ್ದು, ದೆಹಲಿಯಿಂದ ಬೆಂಗಳೂರಿಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಇವರ ಜತೆ ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿರುವ ಡಿಕೆ ಶಿವಕುಮಾರ್​ ಸಹ ಬಂದಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್​​ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಪಕ್ಷದ ಎಲ್ಲಾ ಶಾಸಕರು ಭಾಗವಹಿಸಿ, ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿ, ಆ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಿದ್ದಾರೆ.  

ಕಳೆದ ಐದು ದಿನಗಳ ಮುಖ್ಯಮಂತ್ರಿ ಜಿದ್ದಾಜಿದ್ದಿನ ಪೈಪೋಟಿ ಅಂತಿಮಗೊಂಡಿದ್ದು, ಡಿಕೆ ಶಿವಕುಮಾರ್​ ಅವರ ಮನವೊಲಿಸಿ ಕೆಲವು ಷರತ್ತುಗಳ ಸೂತ್ರದಡಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಡಿಕೆ ಶಿವಕುಮಾರ್​​​ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಪಕ್ಷದ ಘಟಾನುಘಟಿ ನಾಯಕರ ಆಂತರಿಕ ಬೇಗುದಿಗೆ ಕಾಂಗ್ರೆಸ್​ ಹೈಕಮಾಂಡ್​ ಬ್ರೇಕ್​ ಹಾಕಿದೆ. ದೆಹಲಿ ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಅಭಿಮಾನಿಗಳು ಹೂ ಮಳೆ ಸುರಿಸಿ ಸ್ವಾಗತಿಸಿದರು. 

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಜಗದೀಶ್​ ಶೆಟ್ಟರ್​ಗೆ ಸಚಿವ ಸ್ಥಾನ ಖಚಿತ: ಶಾಮನೂರು ಭವಿಷ್ಯ

ಇದನ್ನೂ ಓದಿ: 'ವರುಣಾ ತಂದೆ ಪಾಲಿಗೆ ಲಕ್ಕಿ ಕ್ಷೇತ್ರ': ನಿಜವಾಯ್ತು ತಂದೆ ಬಗ್ಗೆ ಡಾ ಯತೀಂದ್ರ ನುಡಿದಿದ್ದ ಭವಿಷ್ಯ‌

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.