ಯುಐ ಶೂಟಿಂಗ್ ಅಡ್ಡಕ್ಕೆ ಎಂಟ್ರಿ ಕೊಟ್ಟ ಶಿವರಾಜ್ಕುಮಾರ್ - ಉಪೇಂದ್ರ ಶಿವರಾಜ್ಕುಮಾರ್ ಭೇಟಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16031855-thumbnail-3x2-news.jpg)
ಬೆಂಗಳೂರು: ನೆಲಮಂಗಲ ಹತ್ತಿರದಲ್ಲಿರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಯುಐ ಚಿತ್ರೀಕರಣಕ್ಕೆ ದುಬಾರಿ ಸೆಟ್ ಹಾಕಲಾಗಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಶೂಟಿಂಗ್ ಸೆಟ್ಗೆ ಶಿವರಾಜ್ಕುಮಾರ್ ಮತ್ತು ಪತ್ನಿ ಗೀತಾ ಸರ್ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ಈ ಸಿನಿಮಾದ ಮತ್ತೋರ್ವ ನಿರ್ಮಾಪಕ ಮೋಹನ್ ಅವರು ಶಿವರಾಜ್ಕುಮಾರ್ ದಂಪತಿಯನ್ನು ಬರಮಾಡಿಕೊಂಡರು. ಉಪೇಂದ್ರ ಅವರು ಸಿನಿಮಾ ಗೆಟಪ್ನಲ್ಲಿದ್ದ ಕಾರಣ ಕ್ಯಾಮರಾ ಹಿಂದಿನಿಂದಲೇ ಉಪೇಂದ್ರ, ಶಿವರಾಜ್ ಕುಮಾರ್ ಹಾಗೂ ಗೀತಾ ಮೂವರು ಕೆಲ ಹೊತ್ತು ಉಭಯಕುಶಲೋಪರಿ ವಿಚಾರಿಸಿದ್ದಾರೆ. ದಂಪತಿ ಕೆಲ ಹೊತ್ತು ಚಿತ್ರತಂಡದ ಜೊತೆಯೂ ಮಾತುಕತೆ ನಡೆಸಿದ್ದಾರೆ.
Last Updated : Feb 3, 2023, 8:25 PM IST