ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಮುಗಿದು ಹೋದ ಕಥೆ ಎಂದ ಶಾಮನೂರು ಶಿವಶಂಕರಪ್ಪ - ETV Bharat Karnataka
🎬 Watch Now: Feature Video
Published : Oct 9, 2023, 7:17 PM IST
ದಾವಣಗೆರೆ : ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ಅಧಿಕಾರಿಗಳನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ಹೇಳಿಕೆ ಮೂಲಕ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ್ದ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಈಗ ಬೇರೆ ದಾಟಿಯಲ್ಲೇ ಮಾತನಾಡಿದ್ದಾರೆ. ಸೋಮವಾರ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮುನ್ನ ಎಂಬಿಎ ಗ್ರೌಂಡ್ನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಮುಗಿದುಹೋದ ಕಥೆ ಎಂದಿದ್ದಾರೆ.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶಿವಶಂಕರಪ್ಪ ಬಂದು ಮಾತನಾಡಲಿ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ 'ಯಾರು ಹೇಳಿದ್ರು ಸಿಎಂ ಮೀಟ್ ಆಗ್ತಿನಿ ಅಂತಾ, ಎಲ್ಲಾ ಬಗೆಹರಿದು ತೀರ್ಮಾನ ಆಗಿದೆ. ಅದು ಮುಗಿದು ಹೋಗಿರುವ ಕಥೆ. ಸಿಎಂ ಅವರನ್ನು ಪ್ರತಿಬಾರಿ ಹೇಗೆ ಭೇಟಿ ಆಗುತ್ತಿದ್ದೆನೋ ಹಾಗೇ ಭೇಟಿಯಾಗುವೆ. ಅದರಲ್ಲಿ ವಿಶೇಷ ಏನೂ ಇಲ್ಲ. ನನಗೆ ತಲೆ ಕೆಡಿಸಬೇಡಿ ನಡ್ರೀ ಇಲ್ಲಿಂದ ಎಂದು ಮಾಧ್ಯಮದವರ ಮೇಲೆ ಗರಂ ಆದರು.
ಈ ಹಿಂದೆ ನಗರದ ತೋಟದ ಮನೆಯಲ್ಲಿ ವನ್ಯ ಜೀವಿ ಸಾಕಾಣಿಕೆಯ ಸಂಬಂಧ ದಾಖಲಾಗಿದ್ದ ಎಫ್ಐಆರ್ ರದ್ದಾಗಿರುವ ಬಗ್ಗೆ ಪ್ರಶ್ನೆ ಕೇಳಿದಾಗ ಆ ಕುರಿತು ಸಚಿವರನ್ನೇ ಕೇಳಿ ಎಂದು ಶಿವಶಂಕರಪ್ಪ ಹೇಳಿದರು.
ಇದನ್ನೂ ಓದಿ : ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಿವಶಂಕರಪ್ಪರಿಗೆ ಮಾಹಿತಿ ಇದೆ: ಕೂಡಲ ಸಂಗಮ ಶ್ರೀ