ಅಭಿಮಾನಿಗಳತ್ತ ಕೈಬೀಸಿದ ಶಾರುಖ್.. ನಮ್ಮ ಪಂದ್ಯಗಳು ಹೀಗೆ ಗೆಲ್ತಾ ಇರ್ಲಿ ಎಂದ ಜೂಹಿ - ಅಭಿಮಾನಿಗಳತ್ತ ಕೈಬೀಸಿದ ಶಾರುಖ್
🎬 Watch Now: Feature Video
ಕೋಲ್ಕತ್ತಾ, ಪಶ್ಚಿಮ ಬಂಗಾಳ: ಕಳೆದ ದಿನ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ವಿಫಲತೆ ಕಂಡು 81 ರನ್ಗಳಿಂದ ಹೀನಾಯ ಸೋಲು ಕಂಡಿತು. ಮೊದಲ ಪಂದ್ಯದಲ್ಲಿ ಅಬ್ಬರಿಸಿದ ತಂಡದ ಆಟ ಎರಡನೇ ಪಂದ್ಯದಲ್ಲಿ ಕಾಣಲಿಲ್ಲ. ಹೀಗಾಗಿ ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದರು. ಇನ್ನು ಪಂದ್ಯ ಮುಗಿದ ಬಳಿಕ ಮನೆಗೆ ತೆರಳುತ್ತಿದ್ದಾಗ ಬಾಲಿವುಡ್ ನಟ ಶಾರುಖ್ ಖಾನ್ ಈಡನ್ ಗಾರ್ಡನ್ಸ್ ಮೈದಾನ ಹೊರಗಡೆ ನಿಂತ ಅಭಿಮಾನಿಗಳತ್ತ ಕೈ ಬೀಸಿದರು. ಬಳಿಕ ಶಾರುಖ್ ಖಾನ್ ತಮ್ಮ ಮನೆಯತ್ತ ಪ್ರಯಾಣ ಬೆಳಸಿದರು.
ನಮ್ಮ ತಂಡದ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಎಲ್ಲ ಪಂದ್ಯಗಳು ಹೀಗೆಯೇ ಕೊನೆಗೊಳ್ಳಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಕೋಲ್ಕತ್ತಾ ನೈಟ್ ರೈಡರ್ಸ್.. ಕೋಲ್ಕತ್ತಾ ನೈಟ್ ರೈಡರ್ಸ್.. ಎಂದು ಬಾಲಿವುಡ್ ನಟಿ ಮತ್ತು ಸಹ-ಮಾಲೀಕತ್ವ ಹೊಂದಿರುವ ಜೂಹಿ ಚಾವ್ಲಾ ಅವರು ತಮ್ಮ ಸಂತಸ ಹಂಚಿಕೊಂಡರು. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಳಿಕ ಜೂಹಿ ಚಾವ್ಲಾ ತಮ್ಮ ವಾಹನದಲ್ಲಿ ನಿರ್ಗಮಿಸಿದರು.
ಓದಿ: IPL 2023: ಕೆಕೆಆರ್ ದಾಳಿಗೆ ಆರ್ಸಿಬಿ ತತ್ತರ: 123 ರನ್ಗೆ ಸರ್ವಪತನ, ಹೀನಾಯ ಸೋಲು