ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ವಾಹನಗಳು - ದೇಶಾದ್ಯಂತ ಮುಂಗಾರು ಅಬ್ಬರ: ವಿಡಿಯೋ - ಮುಂಗಾರು ಮಳೆ
🎬 Watch Now: Feature Video
ಹಿಮಾಚಲಪ್ರದೇಶ/ ರಾಜಸ್ಥಾನ/ ಅಸ್ಸೋಂ : ಮುಂಗಾರು ಮಳೆಗೆ ದೇಶದ ಹಲವು ರಾಜ್ಯಗಳು ತತ್ತರಿಸುತ್ತಿದ್ದು, ಹಿಮಾಚಲ ಪ್ರದೇಶ ವರುಣನ ಅಬ್ಬರಕ್ಕೆ ನಲುಗಿ ಹೋಗಿದೆ. ಇಲ್ಲಿನ ಮಂಡಿಯಲ್ಲಿ ಕಮಂದ್‌ನ ಮುಂದೆ ಪರಾಶರಕ್ಕೆ ಹೋಗುವ ರಸ್ತೆಯಲ್ಲಿ, ಬಾಘಿ ಸೇತುವೆಯ ಸುತ್ತಲೂ ಮೇಘಸ್ಫೋಟ ಸಂಭವಿಸಿದೆ, ಹೀಗಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಪ್ರವಾಹಕ್ಕೆ ಚಂಬಾದ ವಿದ್ಯಾರ್ಥಿಗಳ ಬಸ್ ಮತ್ತು ಪರಾಶರದಿಂದ ಹಿಂತಿರುಗುತ್ತಿದ್ದ ಹಲವು ವಾಹನಗಳು ಸಿಕ್ಕಿಹಾಕಿಕೊಂಡಿದ್ದವು. ಇನ್ನು ನಿನ್ನೆ ರಾತ್ರಿ ಕುಲುವಿನ ಮೊಹಲ್‌ನಲ್ಲಿ ಭಾರಿ ಮಳೆಗೆ ಹಲವಾರು ವಾಹನಗಳು ಕೊಚ್ಚಿ ಹೋಗಿದ್ದು ಹಾನಿಗೀಡಾಗಿವೆ. ಜೆಸಿಬಿ ಸಹಾಯದಿಂದ ವಾಹನಗಳನ್ನು ಹೊರತೆಗೆಯಲಾಯಿತು.
ಇನ್ನು ರಾಜಸ್ಥಾನದಲ್ಲಿಯು ಎಡೆಬಿಡದೇ ಸುರಿದ ಭಾರಿ ಮಳೆಯಿಂದಾಗಿ ಶ್ರೀ ಗಂಗಾನಗರದ ಹಲವು ಭಾಗಗಳಲ್ಲಿ ತೀವ್ರ ಜಲಾವೃತವಾಗಿದೆ. ಭಾರತದ ಹವಮಾನ ಇಲಾಖೆ ಪ್ರಕಾರ ಶ್ರೀ ಗಂಗಾನಗರದಲ್ಲಿ ಇಂದು ಮಳೆ ಅಥವಾ ಗುಡುಗು ಸಹಿತ ಅಥವಾ ಧೂಳಿನ ಬಿರುಗಾಳಿಯ ಸಾಧ್ಯತೆ ಇದೆ ಎನ್ನುವ ಮುನ್ನೆಚ್ಚರಿಕೆ ನೀಡಿದ್ದಾರೆ.
ಇನ್ನು ಮೊನ್ನೆಯಿಂದ ಪ್ರವಾಹದ ಸಂಕಷ್ಟದಲ್ಲಿ ಸಿಲುಕಿರುವ ಅಸ್ಸೋಂ ರಾಜ್ಯದ ಬಾರ್ಪೇಟಾ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರವಾಗಿದ್ದು, ಸುಮಾರು 1.70 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಇಲ್ಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: 62 ವರ್ಷಗಳಲ್ಲಿ ಇದೇ ಮೊದಲು.. ಮುಂಬೈ ಮತ್ತು ದೆಹಲಿಗೆ ಒಟ್ಟಿಗೆ ಲಗ್ಗೆಯಿಟ್ಟ 'Monsoon'