ಸರಣಿ ಬೈಕ್ ಕಳ್ಳತನಕ್ಕೆ ಬೊಮ್ಮಸಂದ್ರ ನಿವಾಸಿಗಳು ಹೈರಾಣ: ಸಿಸಿಟಿವಿ ವಿಡಿಯೋ - ಹೆಬ್ಬಗೋಡಿ ಪೊಲೀಸ ಠಾಣೆ
🎬 Watch Now: Feature Video
ಆನೇಕಲ್ (ಬೆಂ.ಗ್ರಾ) : ನಗರದಲ್ಲಿ ಕಳ್ಳರು ದುಬಾರಿ ಬೈಕ್‌ಗಳಿಗೆ ಕನ್ನ ಹಾಕುತ್ತಿದ್ದಾರೆ. ಅದರಲ್ಲೂ ಬೆಂಗಳೂರು ಹೊರವಲಯದಲ್ಲಿರುವ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರದ ವಿದ್ಯಾನಗರದಲ್ಲಿ ಸರಣಿ ಬೈಕ್ ಕಳ್ಳತನ ಪ್ರಕರಣಗಳು ನಡೆದಿವೆ. ವಿದ್ಯಾನಗರದ 5ನೇ ಕ್ರಾಸ್‌ನ ಅಪಾರ್ಟ್ಮೆಂಟ್ ಕೆಳಗೆ ನಿಲ್ಲಿಸುತ್ತಿದ್ದ ಬೈಕ್ಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ.
ರಾಯಲ್ ಎನ್‌ಫೀಲ್ಡ್ ಹಾಗೂ ಎಫ್ಜೆಡ್ ಬೈಕ್‌ಗಳನ್ನು ಕದ್ದೊಯ್ದಿದ್ದಾರೆ. ಬೆಳಗಿನ ಜಾವ ಜನರು ನಿದ್ರೆಗೆ ಜಾರಿದ ವೇಳೆಯೇ ಕೈಚಳಕ ತೋರಿಸುತ್ತಿದ್ದಾರೆ. ಬೈಕ್ ಹ್ಯಾಂಡಲ್ ಮುರಿದು ಕೃತ್ಯ ಎಸಗಿ ಎಸ್ಕೇಪ್ ಆಗುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ರುದ್ರೇಶ್ ಎಂಬುವರ ಕಟ್ಟಡದಿಂದ ಎನ್‌ಫೀಲ್ಡ್ ಬೈಕ್‌ಗಳನ್ನು ಕಳ್ಳರು ಕದ್ದೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಾರ್ಟ್ಮೆಂಟ್ ಕೆಳಮಹಡಿಯಲ್ಲಿ 40ಕ್ಕೂ ಹೆಚ್ಚು ಬೈಕ್‌ಗಳನ್ನು ನಿಲ್ಲಿಸಲಾಗಿತ್ತು. ವಿದ್ಯಾನಗರ ಎರಡನೇ ಕ್ರಾಸ್‌ನ ಅರವಿಂದ್ ಎಂಬುವವರಿಗೆ ಸೇರಿದ ಬೈಕ್ ಕೂಡ ಕಳ್ಳತನವಾಗಿದೆ. ಮಾರ್ಚ್ 5ರಂದು ಬೆಳಗ್ಗೆ ಘಟನೆ ನಡೆದಿದೆ. ಬೈಕ್ ಮಾಲೀಕರು ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂಓದಿ:ಮಕ್ಕಳ ವಿಷಯಕ್ಕೆ ನಡೆದ ಗಲಾಟೆಗೆ ಓರ್ವ ಸಾವು: ಪೊಲೀಸರ ಮೇಲೆ ಕಲ್ಲು ತೂರಾಟ, ಗಾಯ