ರಾಷ್ಟೀಯ ಸಮ್ಮೇಳನದ ಹಿರಿಯ ನಾಯಕ ಅಬ್ದುಲ್ ಮಜೀದ್ ಲಾರ್ಮಿ ಅವರ ವಾಣಿಜ್ಯ ಕಟ್ಟಡ ತೆರವು.. - Etv Bharat Kannada
🎬 Watch Now: Feature Video
ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಅಕ್ರಮವಾಗಿ ಒತ್ತುವರಿ ಮಾಡಿರುವ ಸಾರ್ಕರಿ ಜಾಗವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಸರ್ಕಾರ ಮುಂದಾಗಿದೆ. ಇಲ್ಲಿಯ ವಿನ್ಪೋಹ್ ಪ್ರದೇಶದಲ್ಲಿ ಸರ್ಕಾರಕ್ಕೆ ಸೇರಿದ್ದ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ರಾಷ್ಟೀಯ ಸಮ್ಮೇಳನದ ಹಿರಿಯ ನಾಯಕ ಅಬ್ದುಲ್ ಮಜೀದ್ ಲಾರ್ಮಿ ಅವರಿಗೆ ಸೇರಿದ್ದ ವಾಣಿಜ್ಯ ಕಟ್ಟಡವನ್ನು ಇಂದು ತೆರವುಗೊಳಿಸಲಾಗಿದೆ. ಎರಡು ಅಂತಸ್ತಿನ ಕಟ್ಟಡ ಇದಾಗಿದ್ದು, ಬಲ್ಡೋಜರ್ ಮೂಲಕ ತೆರವು ಮಾಡಲಾಗಿದೆ.
ಕಳೆದ ವಾರ ಕಟ್ಟಡವನ್ನು ತೆರವುಗೊಳಿಸವುಂತೆ ಸರ್ಕಾರ ನೋಟಿಸ್ ನೀಡಿತ್ತು. ಅಲ್ಲದೇ ಈ ಕಟ್ಟಡದಲ್ಲಿ ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್ನ ಶಾಖೆ ಇದ್ದ ಕಾರಣ ಒಂದು ವಾರದೊಳಗೆ ಬ್ಯಾಂಕ್ನ್ನು ಬೇರೊಂದು ಕಡೆ ಸ್ಥಳಾಂತರಿಸಲು ಸರ್ಕಾರ ತಿಳಿಸಿತ್ತು. ಅದರಂತೆ ಇಂದು ಕಟ್ಟಡವನ್ನು ನೆಲ ಸಮಗೊಳಿಸಲಾಗಿದೆ.
ಇದನ್ನೂ ಓದಿ: ಹಿಮದಿಂದ ಹೊಳೆಯುತ್ತಿರುವ ಪರ್ವತ ಶ್ರೇಣಿಗಳು: ಗಂಗೋತ್ರಿಯಲ್ಲಿ ಹಿಮಪಾತದ ಅದ್ಭುತ ದೃಶ್ಯ ನೋಡಿ