ಹೊಸಕೋಟೆ ಸ್ವಚ್ಛತೆಗೆ ನಾಲ್ಕು ಕಸ ಸಂಗ್ರಹ ಆಟೋ ಕೊಡುಗೆ ನೀಡಿದ ಶಾಸಕ ಶರತ್ ಬಚ್ಚೇಗೌಡ - etv bharat karnataka
🎬 Watch Now: Feature Video
ಹೊಸಕೋಟೆ(ಬೆಂಗಳೂರು): ನಗರವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಭಾನುವಾರದ ಬಾಡೂಟಕ್ಕೆ ಕೋಳಿಗಳನ್ನು ವಿತರಣೆ ಮಾಡುವ ಮೂಲಕ ಶಾಸಕ ಶರತ್ ಬಚ್ಚೇಗೌಡ ಕೃತಜ್ಞತೆ ಸಲ್ಲಿಸಿದರು. ಹೊಸಕೋಟೆಯ ನಗರಸಭೆಗೆ ಶಾಸಕ ಶರತ್ ಬಚ್ಚೇಗೌಡ ತಮ್ಮ ಸ್ವಂತ ಖರ್ಚಿನಲ್ಲಿ ಕಸ ಸಂಗ್ರಹ ಆಟೋಗಳನ್ನ ಕೊಡುಗೆಯಾಗಿ ನೀಡಿದರು. ನಗರಸಭೆ ಅವರಣದಲ್ಲಿಂದು ನಡೆದ ಕಸ ಸಂಗ್ರಹ ಆಟೋಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ನಾಲ್ಕು ಆಟೋಗಳನ್ನ ನಗರದ ಕಸ ಸಂಗ್ರಹಕ್ಕೆ ಕೊಡುಗೆಯಾಗಿ ವಿತರಿಸಿದರು.
ಈ ವೇಳೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಒಳಚಂರಡಿ ವ್ಯವಸ್ಥೆಯನ್ನ ಮಾಡಿಕೊಡುವುದ್ದಾಗಿ ಭರವಸೆ ನೀಡಲಾಗಿತ್ತು. ಅದರಂತೆ ನೈರ್ಮಲ್ಯಕ್ಕೆ ಸಂಬಂಧಪಟ್ಟಂತೆ ನಾಲ್ಕು ಆಟೋಗಳನ್ನ ಕೊಡಲಾಗಿದೆ. ಹೊಸಕೋಟೆ ನಗರಕ್ಕೆ ಕಾವೇರಿ ನೀರಿನ ಸಂಪರ್ಕದ ವ್ಯವಸ್ಥೆ ಮಾಡಲಾಗುವುದು, ಈ ಕುರಿತು ಉಪ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.