ಸಂತೋಷ್​ ಲಾಡ್​- ಶ್ರೀರಾಮುಲು ಆತ್ಮೀಯ ಆಲಿಂಗನ- ವಿಡಿಯೋ

🎬 Watch Now: Feature Video

thumbnail

By

Published : Feb 2, 2023, 9:51 PM IST

Updated : Feb 3, 2023, 8:40 PM IST

ಬಳ್ಳಾರಿ: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಮಾತಿದೆ. ರಾಜಕೀಯವೇ ಬೇರೆ ವೈಯಕ್ತಿಕ ಸಂಬಂಧಗಳ ಆತ್ಮೀಯತೆಯೇ ಬೇರೆ ಅಂತ ರಾಜಕಾರಣಿಗಳೇ ಹೇಳುತ್ತಾರೆ. ಇದಕ್ಕೆ ನಿದರ್ಶನವೊಂದು ದೊರೆತಿದೆ. ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಸಚಿವ ಶ್ರೀರಾಮುಲು ಪರಸ್ಪರ ಪ್ರೀತಿಯಿಂದ ಆಲಿಂಗನ ಮಾಡಿಕೊಂಡಿದ್ದಾರೆ. ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಶ್ರೀರಾಮುಲು ಮತ್ತು ಸಂತೋಷ್ ಲಾಡ್ ರಾಜಕೀಯವಾಗಿ ಬದ್ಧ ವೈರಿಗಳಾದರೂ ಬಹಳ ದಿನಗಳ ನಂತರ ಭೇಟಿಯಾಗಿದ್ದು, ಪರಸ್ಪರ ತಬ್ಬಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದ ಉಡುಸುಲಮ್ಮ ಜಾತ್ರಾ ಮಹೋತ್ಸವಕ್ಕೆ ಬುಧವಾರ ಆಗಮಿಸಿದ್ದಾಗ ಉಭಯ ನಾಯಕರು ತಮ್ಮ ನಡುವಿನ ಆತ್ಮೀಯತೆಯನ್ನು ಪ್ರದರ್ಶಿಸಿದರು. ಸಂಡೂರು ಮೇಲೆ ಕಣ್ಣಿಟ್ಟಿರುವ ಶ್ರೀರಾಮುಲು ಕ್ಷೇತ್ರದಲ್ಲಿ ಸತತವಾಗಿ ಓಡಾಡುತ್ತಿದ್ದಾರೆ. ಇನ್ನು, ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‍ಗಾಗಿ ಸಂತೋಷ್ ಲಾಡ್ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸಿಡಿ ಬಗ್ಗೆ ಮಕ್ಕಳು ನನಗೆ ಪ್ರಶ್ನೆ ಕೇಳ್ತಾರೆ, ನಾನೇನು ಹೇಳಲಿ?: ಸಿಎಂ ಇಬ್ರಾಹಿಂ

Last Updated : Feb 3, 2023, 8:40 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.