ತುಮಕೂರಿನಲ್ಲಿ ನವರಾತ್ರಿ ಸಂಭ್ರಮ: ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗಿಂದು ಸಂತಾನ ಲಕ್ಷ್ಮಿ ಅಲಂಕಾರ - ವಿಡಿಯೋ
🎬 Watch Now: Feature Video
Published : Oct 21, 2023, 10:41 PM IST
ತುಮಕೂರು: ಜಿಲ್ಲೆಯ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಇಂದು ಸಂತಾನ ಲಕ್ಷ್ಮಿ ಅಲಂಕಾರವನ್ನು ಮಾಡಲಾಗಿತ್ತು. ನೂರಾರು ಭಕ್ತರು ಇಂದು ನಿರಂತರವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಗೆ ನಾಳೆ ದುರ್ಗಾದೇವಿಯ ಅಲಂಕಾರ ಮಾಡಲಾಗುತ್ತದೆ. ದೇವಸ್ಥಾನಕ್ಕೆ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತಿದ್ದಾರೆ. ಅದರಲ್ಲೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ.
ದೇವಸ್ಥಾನದ ವಿಶೇಷತೆ ಏನು?: ಈ ದೇವಸ್ಥಾನ ಸುಮಾರು 200 ವರ್ಷಗಳ ಇತಿಹಾಸವನ್ನು ಹೊಂದಿದೆ. ಕರಕುಶಲ ಕೆತ್ತನೆ, ಪುಷ್ಪಾಲಂಕಾರ, ಹೀಗೆ ಎಲ್ಲ ಬಗೆಯ ಅಧ್ಯಾತ್ಮಿಕ ಅನುಸಂಧಾನಗಳಿಗೆ ಈ ದೇಗುಲ ಪ್ರಸಿದ್ಧವಾಗಿದೆ. ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆ ಇರುತ್ತದೆ.
ಸಂತಾನ ಭಾಗ್ಯ ಕರುಣಿಸುವ ಸಂತಾನ ಲಕ್ಷ್ಮಿ: ಸಂತಾನ ಲಕ್ಷ್ಮಿ ದೇವಿಯ 108 ಹೆಸರುಗಳನ್ನ ಒಳಗೊಂಡಿದ್ದು, ಆಕೆಯನ್ನ ಸಂತಾನ ಭಾಗ್ಯ ಕರುಣಿಸುವವಳು ಎನ್ನಲಾಗುತ್ತದೆ. ಆಕೆಯ ಮಡಿಲಲ್ಲಿ ಮಗು, 6 ಕೈಗಳು 2 ಕಲಶಗಳು, ಖಡ್ಗ, ಗುರಾಣಿ ಮತ್ತು ಅಭಯ ಮುದ್ರೆ ಇರುತ್ತದೆ. ಇನ್ನು ಈ ಶತನಾಮಾವಳಿಯನ್ನ ಪಠಣೆ ಮಾಡಿದರೆ ಸಂತಾನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: ನವರಾತ್ರಿ ವೈಭವ: ಮಂಗಳೂರಲ್ಲಿ ಹುಲಿವೇಷ ಕುಣಿತದ ಅಬ್ಬರ.. ನರ್ತನದ ಹಿಂದಿದೆ ವಿಶೇಷ ಧಾರ್ಮಿಕ ನಂಬಿಕೆ!