ಮರಳಿನಲ್ಲಿ ಅರಳಿದ ನೂತನ ಸಂಸತ್ ಭವನ - ವಿಡಿಯೋ - ಪುರಿ
🎬 Watch Now: Feature Video
ಪುರಿ(ಒಡಿಶಾ): ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಇಂದು ಉದ್ಘಾಟಿಸಿದರು. ಈ ಸ್ಮರಣೀಯ ದಿನದ ನೆನಪಿಗಾಗಿ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಸಮುದ್ರ ತೀರದಲ್ಲಿ ಮರಳಿನಲ್ಲಿ ನೂತನ ಸಂಸತ್ ಭವನದ ಪ್ರತಿಕೃತಿ ರಚಿಸಿದ್ದಾರೆ. ಮರಳು ಕಲೆಯಲ್ಲಿ ಸೆಂಗೋಲ್, ಲೋಕಸಭೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಇರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಲಾವಿದ ಸುದರ್ಶನ್ ಪಟ್ನಾಯಕ್, ಮರಳಿನ ಪ್ರತಿಕೃತಿಯ ವಿಡಿಯೋವನ್ನು ಹಂಚಿಕೊಂಡಿದ್ದು, "ಹೊಸ ಸಂಸತ್ತಿನ ಕಟ್ಟಡ ನವಭಾರತದ ಸಂಕೇತ. ರಾಷ್ಟ್ರಕ್ಕೆ ನೀಡಿದ ಈ ಕೊಡುಗೆಯ ಸಮರ್ಪಣೆಗಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. 75 ವರ್ಷಗಳ ಸ್ವಾತಂತ್ರ್ಯದ ನಂತರ ನಮ್ಮದೇ ಆದ ಸಂಸತ್ತಿನ ನಿರ್ಮಾಣವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಸಂತಸವನ್ನು MyParliamentMyPride ಎಂಬ ಸಂದೇಶದೊಂದಿಗೆ ಒಡಿಶಾದ ಪುರಿ ಕಡಲತೀರದಲ್ಲಿ ನೂತನ ಸಂಸತ್ ಭವನದ ಮರಳಿನ ಪ್ರತಿಕೃತಿಯನ್ನು ರಚಿಸಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ, ಸ್ಪೀಕರ್ ಪೀಠದ ಬಳಿ ಸೆಂಗೋಲ್ ಪ್ರತಿಷ್ಠಾಪನೆ