ಅನಾಥ ಯುವತಿಯರಿಗೆ ಅದ್ಧೂರಿ ಮದುವೆ ಮಾಡಿಸಿದ ನೆರೆಹೊರೆಯರು: ಅತ್ತೆ ಮನೆಗೆ ಖುಷಿಯಿಂದ ನವವಧುಗಳ ಹೆಜ್ಜೆ - ಮಧ್ಯ ಪ್ರದೇಶದ ಸಾಗರ ಜಿಲ್ಲೆ
🎬 Watch Now: Feature Video
ಸಾಗರ (ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ಇಬ್ಬರು ಅನಾಥ ಹೆಣ್ಣು ಮಕ್ಕಳಿಗೆ ನೆರೆಹೊರೆಯವರೇ ಮುಂದೆ ನಿಂತ ಅದ್ಧೂರಿ ಮದುವೆ ಮಾಡಿಸಿ ಮಾದರಿಯಾಗಿದ್ದಾರೆ. ಇಲ್ಲಿನ ಮಧುಕರ್ ಷಾ ವಾರ್ಡ್‌ನ ನಿವಾಸಿಗಳಾದ ಭಾರತಿ ಮತ್ತು ಅರ್ಚನಾ ಪೋಷಕರಿಲ್ಲದ ಅನಾಥರಾಗಿದ್ದು, 16 ವರ್ಷಗಳ ಹಿಂದೆಯೇ ತಾಯಿ ಮೃತಪಟ್ಟಿದ್ದರೆ, ಒಂದು ವರ್ಷದ ಹಿಂದೆ ತಂದೆ ಸಹ ನಿಧನರಾಗಿದ್ದರು. ಅಂದಿನಿಂದ ಇಬ್ಬರು ನೆರೆಹೊರೆಯವರನ್ನು ಅವಲಂಬಿಸಬೇಕಾಯಿತು. ಇವರ ಪರಿಸ್ಥಿತಿಯನ್ನು ಮನಗಂಡ ಅಕ್ಕಪಕ್ಕದವರು ಇಬ್ಬರಿಗೂ ವರರನ್ನು ಹುಡುಕಿದ್ದು ಮಾತ್ರವಲ್ಲದೇ, ಮದುವೆಯ ಎಲ್ಲ ಬೇಕು-ಬೇಡಗಳನ್ನೂ ಪೂರೈಸಿದ್ದಾರೆ. ಇದರಿಂದ ತಂದೆ-ತಾಯಿ ಇಲ್ಲದಿದ್ದರೂ ಅನಾಥ ಹೆಣ್ಣು ಮಕ್ಕಳುಅತ್ತೆ ಮನೆಗೆ ಖುಷಿಯಿಂದ ಹೆಜ್ಜೆಹಾಕಿದ್ದಾರೆ.
Last Updated : Feb 3, 2023, 8:34 PM IST