ETV Bharat / technology

ಇಂದು ಅಯನ ಸಂಕ್ರಾಂತಿ: ಏನೇ ಕೆಲಸ ಇದ್ದರೂ ಬೇಗ ಮುಗಿಸಿಕೊಳ್ಳಿ, ಹಗಲು ಇರೋದು ಎಂಟೇ ಗಂಟೆ! ಕಾರಣ ಏನು ಗೊತ್ತಾ? - SHORTEST DAY AND LONGEST NIGHT

- ಪ್ರತಿ ವರ್ಷವೂ ಇದು ಸಂಭವಿಸುತ್ತೆ. - ಹಗಲು ಇಷ್ಟೊಂದು ಕಡಿಮೆ ಇರಲು ಕಾರಣವೇನು ಗೊತ್ತೇ?

WINTER SOLSTICE 2024 DETAILS
- ಪ್ರತಿ ವರ್ಷವೂ ಇದು ಸಂಭವಿಸುತ್ತೆ. - ಹಗಲು ಇಷ್ಟೊಂದು ಕಡಿಮೆ ಇರಲು ಕಾರಣವೇನು ಗೊತ್ತೇ? (ETV Bharat)
author img

By ETV Bharat Karnataka Team

Published : Dec 20, 2024, 6:31 AM IST

Updated : Dec 21, 2024, 7:14 AM IST

WINTER SOLSTICE 2024 DETAILS: ಸಾಮಾನ್ಯವಾಗಿ ಒಂದು ದಿನ ಎಂದರೆ.. 12 ಗಂಟೆ ಹಗಲು ಮತ್ತು 12 ಗಂಟೆ ರಾತ್ರಿ ಇರುತ್ತೆ. ಇದು ಸಾಮಾನ್ಯ ಕೂಡಾ ಹೌದು. ಆದರೂ ಕೆಲವೊಮ್ಮೆ ಹಗಲು ಹೆಚ್ಚು ಮತ್ತು ರಾತ್ರಿ ಅವಧಿ ಕಡಿಮೆ ಇರುತ್ತೆ. ಮತ್ತೆ ಕೆಲವೊಮ್ಮೆ ಹಗಲುಗಳು ಚಿಕ್ಕದಾಗಿರುತ್ತವೆ ಮತ್ತು ರಾತ್ರಿಗಳು ದೀರ್ಘಾವಧಿಯದ್ದಾಗಿರುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು "ಅಯನ ಸಂಕ್ರಾಂತಿ" ಎಂದು ಕರೆಯಲಾಗುತ್ತದೆ.

ಅಂತಹ ದಿನವು ಈ ವರ್ಷ ಡಿಸೆಂಬರ್ 21 ರಂದು ಬರಲಿದೆ. ಈ ದಿನದಂದು ಹಗಲಿನ ಸಮಯ ಅತ್ಯಂತ ಕಡಿಮೆ ಆಗಿರುತ್ತದೆ. ಮತ್ತು ಅಂದು ರಾತ್ರಿ ಸಮಯವು ತುಂಬಾ ದೀರ್ಘವಾಗಿರುತ್ತದೆ. ಇದು ನಿಜವಾಗಿ ಏಕೆ ಸಂಭವಿಸುತ್ತದೆ? ಈ ವರದಿಯಲ್ಲಿ ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಸೂರ್ಯನಿಂದ ಭೂಮಿಯ ದೂರ: ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ಆಕಾಶದಲ್ಲಿ ತನ್ನ ಅತ್ಯುನ್ನತ ಅಥವಾ ಕಡಿಮೆ ಬಿಂದುವನ್ನು ತಲುಪಿದಾಗ ಸೂರ್ಯನ ಸುತ್ತ ಭೂಮಿಯ ಕಕ್ಷೆಯಲ್ಲಿರುವ ಎರಡು ಬಿಂದುಗಳನ್ನು ಅಯನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದು ವರ್ಷದ ದೀರ್ಘವಾದ ದಿನ (ಬೇಸಿಗೆಯ ಅಯನ ಸಂಕ್ರಾಂತಿ) ಮತ್ತು ಕಡಿಮೆ ದಿನ (ಚಳಿಗಾಲದ ಅಯನ ಸಂಕ್ರಾಂತಿ) ಗೆ ಕಾರಣವಾಗುತ್ತದೆ. ಈ ರೀತಿ ವರ್ಷದಲ್ಲಿ ಎರಡು ಪ್ರಮುಖ ವಿದ್ಯಾಮಾನಗಳು ನಡೆಯುತ್ತವೆ.

ಚಳಿಗಾಲದ ಅಯನ ಸಂಕ್ರಾಂತಿ: ಹಗಲಿನ ಸಮಯ ಕಡಿಮೆ ಮತ್ತು ರಾತ್ರಿಯ ಸಮಯವು ದೀರ್ಘವಾಗಿರುವ ಪರಿಸ್ಥಿತಿಯನ್ನು ಚಳಿಗಾಲದ ಅಯನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್ 19 ರಿಂದ 23 ರ ನಡುವೆ ಸಂಭವಿಸುತ್ತದೆ. ಈ ಬಾರಿ ಅದು ಡಿಸೆಂಬರ್​ 21 ರಂದು ನಡೆಯಲಿದೆ. ಚಳಿಗಾಲದ ಅಯನ ಸಂಕ್ರಾಂತಿಯಂದು ಸೂರ್ಯನಿಂದ ಭೂಮಿಗೆ ಇರುವ ಅಂತರವು ತುಂಬಾ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ ಚಂದ್ರನ ಬೆಳಕು ಭೂಮಿಯ ಮೇಲೆ ಹೆಚ್ಚು ಕಾಲ ಇರುತ್ತದೆ. ಈ ದಿನ ಭೂಮಿಯು ತನ್ನ ಧ್ರುವದಲ್ಲಿ 23.4 ಡಿಗ್ರಿಗಳಷ್ಟು ಓರೆಯಾಗಿರುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ನೈಸರ್ಗಿಕ ಬದಲಾವಣೆಯಿಂದಾಗಿ ಡಿಸೆಂಬರ್ 21, 2024 ರಂದು ಈ ವರ್ಷದ ಅತ್ಯಂತ ಕಡಿಮೆ ಹಗಲು ಇರಲಿದೆ. ಅಂದು ಹಗಲು ಕೇವಲ 8 ಗಂಟೆಗಳ ಕಾಲ ಮಾತ್ರವೇ ಇರುತ್ತದೆ. ಇನ್ನು ನಾಳೆ ಎಂದರೆ ಶನಿವಾರ 16 ಗಂಟೆಗಳ ಸುದೀರ್ಘ ರಾತ್ರಿ ಇರುತ್ತದೆ. ಅಷ್ಟು ಹೊತ್ತು ಚಂದ್ರ ಈ ಜಗವನ್ನು ಬೆಳಗುತ್ತಿರುತ್ತಾನೆ.

ಅಯನ ಸಂಕ್ರಾಂತಿಯ ಮೇಲಿರುವ ನಂಬಿಕೆಗಳು: ಅನೇಕ ದೇಶಗಳಲ್ಲಿನ ಜನರು ಚಳಿಗಾಲದ ಅಯನ ಸಂಕ್ರಾಂತಿಯ ಬಗ್ಗೆ ವಿಭಿನ್ನ ನಂಬಿಕೆಗಳನ್ನು ಹೊಂದಿದ್ದಾರೆ. ಚೀನಾದಲ್ಲಿ ಮತ್ತು ಇತರ ಪೂರ್ವ ಏಷ್ಯಾದ ದೇಶಗಳಲ್ಲಿ ಬೌದ್ಧಧರ್ಮದ ಯಿನ್ ಮತ್ತು ಯಾಂಗ್ ಶಾಖೆಗೆ ಸೇರಿದ ಜನರು ಈ ದಿನವು ಏಕತೆ ಮತ್ತು ಸಮೃದ್ಧಿಯ ಸಂಕೇತವಾಗಿದೆ ಎಂದು ನಂಬುತ್ತಾರೆ. ಉತ್ತರ ಭಾರತದಲ್ಲಿ ಶ್ರೀಕೃಷ್ಣನಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ ಮತ್ತು ಗೀತಾಪಾರಾಯಣವನ್ನು ಮಾಡಲಾಗುತ್ತದೆ. ಪುಷ್ಯ ಮಾಸ ಹಬ್ಬವನ್ನು ರಾಜಸ್ಥಾನದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಸೂರ್ಯನ ಉತ್ತರ ಪ್ರಕ್ರಿಯೆಯು ಚಳಿಗಾಲದ ಅಯನ ಸಂಕ್ರಾಂತಿಯಿಂದ ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

ಹೀಗಿರುತ್ತೆ ತಾಪಮಾನ : ಚಳಿಗಾಲದ ಅಯನ ಸಂಕ್ರಾಂತಿಯ ದಿನ ಮತ್ತು ದಿನಾಂಕವು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ. ಈ ಅಪರೂಪದ ಘಟನೆ ಇದೇ 21 ರಂದು ಸಂಭವಿಸಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಈ ದಿನ ಸೂರ್ಯನ ಕಿರಣಗಳು ಭೂಮಿಯನ್ನು ನಿಧಾನವಾಗಿ ತಲುಪುತ್ತವೆ. ಈ ಕಾರಣದಿಂದಾಗಿ, ತಾಪಮಾನದಲ್ಲಿ ಬದಲಾವಣೆಗಳು ಸಂಭವಿಸುತ್ತವೆ ಮತ್ತು ದೇಶಾದ್ಯಂತ ಕನಿಷ್ಠ ತಾಪಮಾನ ದಾಖಲಿಸಲಾಗುತ್ತದೆ.

ಇದನ್ನು ಓದಿ:ಶಾಕಿಂಗ್​ ಹೇಳಿಕೆ ನೀಡಿದ ನಾಸಾ: ಸುನೀತಾ ವಿಲಿಯಮ್ಸ್, ಬುಚ್​ ವಿಲ್ಮೋರ್​ ಭೂಮಿಗೆ ಕರೆತರಲು ಮತ್ತೆ ವಿಳಂಬ!

Last Updated : Dec 21, 2024, 7:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.