ವಾಂಖೆಡೆಯಲ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ಜೀವಮಾನದ ಪ್ರತಿಮೆ : ವಿಶ್ವಕಪ್​ ವೇಳೆಗೆ ಅನಾವರಣ - ETV Bharath Kannada news

🎬 Watch Now: Feature Video

thumbnail

By

Published : Feb 28, 2023, 1:09 PM IST

ಮುಂಬೈ (ಮಹಾರಾಷ್ಟ್ರ): ವಾಂಖೆಡೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವಮಾನದ ಪ್ರತಿಮೆ ಅನಾವರಣಗೊಳ್ಳಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​, ನನ್ನ ವೃತ್ತಿಜೀವನ ಈ ಮೈದಾನದಿಂದ ಪ್ರಾರಂಭವಾಗಿತ್ತು. ನನ್ನ ಜೀವನದ ಅತಿದೊಡ್ಡ ಕ್ರಿಕೆಟ್ ಕ್ಷಣವೆಂದರೆ 2011 ರಲ್ಲಿ ನಾವು ವಿಶ್ವಕಪ್​ನಲ್ಲಿ ಗೆಲುವು ಸಾಧಿಸಿದ್ದು, ನಾನು ಕೊನೆಯ ಪಂದ್ಯವನ್ನು 2013 ರಲ್ಲಿ ಆಡಿದ್ದು. ಹೆಚ್ಚಿನ ನನ್ನ ನೆನಪುಗಳು ಈ ಕ್ರೀಡಾಂಗಣದಲ್ಲಿದೆ ಎಂದಿದ್ದಾರೆ. 

ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಮಂಗಳವಾರ ಸುದ್ದಿ ಪ್ರಕಟಿಸಿದ್ದಾರೆ. ಐಕಾನಿಕ್ ಸ್ಟೇಡಿಯಂನಲ್ಲಿ ಆಟಗಾರರ ಪ್ರತಿಮೆಯನ್ನು ಸ್ಥಾಪಿಸಿದ ಮೊದಲ ನಿದರ್ಶನವಾಗಿದೆ. 2023ರ ಐಸಿಸಿ ವಿಶ್ವಕಪ್ ವೇಳೆ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಮಹಾರಾಷ್ಟ್ರ ಕ್ರಿಕೆಟ್​ ಅನೋಸಿಯೇಷನ್​ ಹೊರಗೆ ಇರುವ ಜಾಗದಲ್ಲಿ ಅಭಿಮಾನಿಗಳ ವೀಕ್ಷಣೆಗೆ ಸಿಗುವಂತೆ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಮೆಸ್ಸಿಗೆ 2022 ಫಿಫಾ ಅತ್ಯುತ್ತಮ ಪುರುಷರ ಆಟಗಾರ ಪ್ರಶಸ್ತಿ 

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.