ಪರಿಸರ ಸಂರಕ್ಷಣೆಗಾಗಿ 'ರನ್ ಫಾರ್ ನೇಚರ್': ಸಾಲು ಮರದ ತಿಮ್ಮಕ್ಕ ಚಾಲನೆ - ಹುಬ್ಬಳ್ಳಿ
🎬 Watch Now: Feature Video
ಹುಬ್ಬಳ್ಳಿ: ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರೀನ್ ಕರ್ನಾಟಕ ಅಸೋಸಿಯೇಷನ್, ವಸುಂಧರಾ ಫೌಂಡೇಶನ್ ಮತ್ತು ವಿ ಕೇರ್ ಫೌಂಡೇಶನ್ ವತಿಯಿಂದ 'ರನ್ ಫಾರ್ ನೇಚರ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೃಕ್ಷಮಾತೆ, ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾವಿರಾರು ಜನರು ಭಾವಹಿಸಿದ್ದರು.
ತೋಳನಕೆರೆಯಿಂದ ಓಕ್ಸ್ ಹೋಟೆಲ್ 6 ಕಿ.ಮೀ ರನ್ ಮಾಡುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ಸೃಷ್ಟಿಯನ್ನು ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಕಾಲಗಳ ಏರುಪೇರಿನಿಂದಾಗಿ ನಾವು ವಿನಾಶದ ಮಟ್ಟ ತಲುಪಿದ್ದೇವೆ. ಹೀಗಾಗಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಸೃಷ್ಟಿಯನ್ನು ಉಳಿಸುವ ಕೆಲಸ ಮಾಡಬೇಕು" ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ಅಧ್ಯಕ್ಷ ಉಮೇಶ ಬಳ್ಳೂರ್ ಹಾಗೂ ಟ್ರೀ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಡಾ.ವಿಜಯ್ ನಿಶಾಂತ್ ಅವರು ಪರಿಸರ ರಕ್ಷಣೆ ಹಾಗೂ ಉಳಿವಿಗಾಗಿ ಪ್ರತಿಯೊಬ್ಬರಿಗೂ ಇರಬೇಕಾದ ಜವಾಬ್ದಾರಿ ಕುರಿತು ಸಾರ್ವಜನಿಕರಿಗೆ ಸಲಹೆ, ಸೂಚನೆಗಳನ್ನು ನೀಡಿದರು. ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರೀ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ವಿಜಯ ನಿಶಾಂತ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: ಅರಣ್ಯ ಬೆಳೆಸಿ ಪರಿಸರ ರಕ್ಷಣೆಗೆ ಮುಂದಾದ ಗಢವಾಲ್ ಯುನಿವರ್ಸಿಟಿ... 10 ಸಾವಿರ ಟನ್ ಇಂಗಾಲ ತಡೆದ ತಜ್ಞರು!