ಕೇಂದ್ರ ಸಚಿವ ಇದ್ದ ವೇದಿಕೆಯ ಮೇಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ... ವಿಡಿಯೋ - ವೇದಿಕೆಯ ಮೇಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ
🎬 Watch Now: Feature Video
ಜೈಪುರ್(ರಾಜಸ್ಥಾನ): ವಿದ್ಯಾರ್ಥಿ ಸಂಘದ ಕಚೇರಿಯನ್ನು ಉದ್ಘಾಟಿಸಲು ಇಲ್ಲಿಯ ಮಹಾರಾಣಿ ಕಾಲೇಜಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಗಮಿಸಿದ್ದರು. ಈ ವೇಳೆ ಅವರಿದ್ದಂತಹ ವೇದಿಕೆಯ ಮೇಲೆಯೇ ರಾಜಸ್ಥಾನ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಅರವಿಂದ್ ಜಾಜ್ಡಾ ಎಂಬುವವರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿರ್ಮಲ್ ಚೌಧರಿ ಎಂಬುವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಿರ್ಮಲ್ ಚೌಧರಿ ವೇದಿಕೆ ಮೇಲೆ ಹತ್ತಿ ವಿದ್ಯಾರ್ಥಿಗಳತ್ತ ಕೈ ಬೀಸುತ್ತ ಸಾಗಿದಾಗ ಹಿಂದಿದ್ದ ಅರವಿಂದ್ ಜಾಜ್ಡಾ ಅವರ ತಲೆಯ ಭಾಗಕ್ಕೆ ಹೊಡೆದು ವೇದಿಕೆಯಿಂದ ತಳ್ಳಿದ್ದಾರೆ. ಅಲ್ಲೇ ಇದ್ದಂತಹ ನಿರ್ಮಲ್ ಚೌಧರಿ ಬೆಂಬಲಿಗರು ಅರವಿಂದ್ ಮೇಲೆ ದಾಳಿ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಳಿಕ ಇಬ್ಬರ ಬೆಂಬಲಿಗರ ನಡುವೆ ಗಲಾಟೆ ಏರ್ಪಟ್ಟಿದೆ. ಪೊಲೀಸರು ಮಧ್ಯಪ್ರವೇಶಿಸಿ ಜಗಳವನ್ನು ಶಾಂತಗೊಳಿಸಿದ್ದಾರೆ. ಇನ್ನು, ವೇದಿಕೆ ಮೇಲೆ ನಿರ್ಮಲ್ ಚೌಧರಿ ಬೆಂಬಲಿಗರು ಅರವಿಂದ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಕಾರ್ಯಕ್ರಮಕ್ಕೂ ಮುಂಚೆ ನಿರ್ಮಲ್ ಚೌಧರಿ ಮತ್ತು ಅರವಿಂದ್ ಜಾಜ್ಡಾ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿತ್ತು. ಈ ಹಿನ್ನೆಲೆ ಕೇಂದ್ರ ಸಚಿವರು ಇದ್ದಂತಹ ವೇದಿಕೆ ಮೇಲೆ ಅರವಿಂದ್ ಜಾಜ್ಡಾ ನಿರ್ಮಲ ಚೌಧರಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Watch.. ಸಂಸದೆ ಸುಮಲತಾ ಅಂಬರೀಶ್ ವೇದಿಕೆ ಹತ್ತುವ ವಿಚಾರ: ಎರಡು ಗುಂಪುಗಳ ನಡುವೆ ವಾಗ್ವಾದ