ಶೃಂಗೇರಿ ಶಾರದಾ ಪೀಠಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ - ಮೋಹನ್ ಭಾಗವತ್
🎬 Watch Now: Feature Video
Published : Oct 5, 2023, 6:04 PM IST
ಚಿಕ್ಕಮಗಳೂರು : ಶೃಂಗೇರಿ ಶಾರದಾ ಪೀಠಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಇಂದು ದಿಢೀರ್ ಭೇಟಿ ನೀಡಿದರು. ಶಾರದಾಂಬೆಯ ದರ್ಶನ ಪಡೆದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ, ದೇವಸ್ಥಾನದ ಆಡಳಿತ ಮಂಡಳಿ ಭವ್ಯ ಸ್ವಾಗತ ಕೋರಿತು. ಪೂಜೆಯ ನಂತರ ಭಾಗವತ್, ಮಠದ ನರಸಿಂಹ ವನದಲ್ಲಿರುವ ಇಬ್ಬರು ಗುರುವತ್ರಯರ ಆಶೀರ್ವಾದ ಪಡೆದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಹಿರಿಯ ಗುರುಗಳಾದ ಭಾರತೀ ತೀರ್ಥ ಶ್ರೀ ಹಾಗೂ ಕಿರಿಯ ಗುರು ವಿಧುಶೇಖರ ಶ್ರೀ ಜೊತೆ ಮಾತುಕತೆ ನಡೆಸಿದರು. ಭಾಗವತ್ ಅವರು ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲು ಬಂದಿರುವ ಅನುಮಾನ ವ್ಯಕ್ತವಾಗಿದೆ. ರಾಜ್ಯ ಮಟ್ಟದ ಐವರು ಆರ್‌ಎಸ್‌ಎಸ್ ಸದಸ್ಯರು ಈ ಸಂದರ್ಭದಲ್ಲಿ ಜೊತೆಗಿದ್ದರು. ಶಾರದಾ ಪೀಠಕ್ಕೆ ಮೋಹನ್ ಭಾಗವತ್ ಭೇಟಿಯ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.
ಇದನ್ನೂ ಓದಿ : ಬಿಳಿಗಿರಿ ರಂಗನಾಥಸ್ವಾಮಿ ಸನ್ನಿಧಿಗೆ ವಿಜಯ್ ರಾಘವೇಂದ್ರ ಭೇಟಿ.. ಪುತ್ರನ ಹೆಸರಲ್ಲಿ ಅರ್ಚನೆ ಮಾಡಿಸಿದ ಚಿನ್ನಾರಿ ಮುತ್ತ