ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯ ಜೀವ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ - ವಿಡಿಯೋ - ಮುಂಬೈ ಲೋಕಲ್ ರೈಲು
🎬 Watch Now: Feature Video
ಮುಂಬೈ: ರೈಲ್ವೆ ಸಂರಕ್ಷಣಾ ಪಡೆ ( ಆರ್‌ಪಿಎಫ್) ಸಿಬ್ಬಂದಿಯ ತ್ವರಿತ ಚಿಂತನೆ ಮತ್ತು ಕ್ಷಿಪ್ರ ಕಾರ್ಯದಿಂದಾಗಿ ಮಹಿಳಾ ಪ್ರಯಾಣಿಕರೊಬ್ಬರ ಜೀವ ಉಳಿದಿದೆ. ಫೆಬ್ರವರಿ 22 ರಂದು ಸಂಜೆ 4:58ಕ್ಕೆ ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ದಹಿಸರ್‌ನಿಂದ ವಿರಾರ್‌ಗೆ ಪ್ರಯಾಣಿಸಲು ರೈಲು ಹತ್ತಿದ್ದ ಮಹಿಳೆಯೊಬ್ಬರು ಟ್ರೈನ್ ಮುಂದೆಹೋಗುತ್ತಿದ್ದಂತೆ ಕಾಲು ಜಾರಿ ಹಳಿ ಮತ್ತು ರೈಲಿನ ನಡುವೆ ಬಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಆರ್‌ಪಿಎಫ್ ಅಧಿಕಾರಿ ಮಹಿಳೆಯನ್ನ ಹೊರಕ್ಕೆ ಎಳೆದುಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಕೇಂದ್ರ ಮತ್ತು ಪಶ್ಚಿಮ ಮಾರ್ಗಗಳು ಸೇರಿದಂತೆ ರೈಲಿನಿಂದ ಬಿದ್ದು 700 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮುಂಬೈನ ಜೀವನಾಡಿ ಎಂದೇ ಕರೆಯುವ ಮುಂಬೈ ಲೋಕಲ್ ರೈಲಿನಿಂದ ಬಿದ್ದು ಒಂದು ವರ್ಷದಲ್ಲಿ 2,507 ಮಂದಿ ಸಾವನ್ನಪ್ಪಿದ್ದಾರೆ. ಅಪರಾಧಗಳನ್ನು ಕಡಿಮೆ ಮಾಡಲು ರೈಲ್ವೆ ಆಡಳಿತ ಮತ್ತು ರೈಲು ಭದ್ರತಾ ಪಡೆ ಸಿಬ್ಬಂದಿ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಹೊರತಾಗಿಯೂ, ರೈಲು ಸಂಬಂಧಿತ ಅಪಘಾತಗಳಲ್ಲಿ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಕಳವಳಕಾರಿ. ಹೆಚ್ಚುತ್ತಿರುವ ರೈಲು ಅಪಘಾತಗಳಿಗೆ ಪ್ರಯಾಣಿಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಪ್ರಯಾಣಿಕರು ನಿಲ್ದಾಣದ ಪ್ರದೇಶದಲ್ಲಿ ಅಥವಾ ರೈಲಿನೊಳಗೆ ಹಾಕಿರುವ ಪ್ರಕಟಣೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Watch... ಚಲಿಸುವ ರೈಲಿನ ಕೆಳಗೆ ಸಿಲುಕಿದ ಮಹಿಳೆ ಪ್ರಾಣಾಪಾಯದಿಂದ ಪಾರು!