ಚಾರ್ಜರ್ ಕೊಟ್ಟಿಲ್ಲವೆಂದು ಮೊಬೈಲ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ... ಪುಡಿರೌಡಿ ಬಂಧನ - ವಿಡಿಯೋ - ಸೀಗೆಹಳ್ಳಿ ಗೇಟ್
🎬 Watch Now: Feature Video
ನೆಲಮಂಗಲ: ಚಾರ್ಜರ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಮೊಬೈಲ್ ಅಂಗಡಿ ಸಿಬ್ಬಂದಿಯ ಮೇಲೆ ಪುಡಿರೌಡಿಗಳು ಹಲ್ಲೆ ನಡೆಸಿದ್ದು, ಹಲ್ಲೆಯ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಬೆಂಗಳೂರು ಉತ್ತರ ತಾಲೂಕು ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 23 ರಂದು ಮೊಬೈಲ್ ಅಂಗಡಿಗೆ ಬಂದ ಪುಡಿರೌಡಿಯೊಬ್ಬ ಚಾರ್ಜರ್ ಕೇಳಿದ್ದಾನೆ. ಆಗ ಅಂಗಡಿ ಸಿಬ್ಬಂದಿಯು ಮೊತ್ತೊಬ್ಬರು ಚಾರ್ಜಿಂಗ್ ಹಾಕೊಂಡಿದ್ದಾರೆ, ಅನಂತರ ಕೊಡುವುದಾಗಿ ಹೇಳಿದ್ದಾನೆ. ಇಷ್ಟಕ್ಕೆ ಕೆರಳಿದ ಆತ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿತ್ತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆರೋಪಿಗಳ ಬೆನ್ನತ್ತಿದ್ದ ಪೊಲೀಸರು, ಮಂಜುನಾಥ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ, ಉಳಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮದ್ಯ ಸೇವನೆ ನಿಲ್ಲಿಸುವಂತೆ ಬುದ್ಧಿವಾದ ಹೇಳಿದ್ದಕ್ಕೆ ಪತ್ನಿಗೆ ಈ ಶಿಕ್ಷೆ!