ಶಿವಮೊಗ್ಗ: ಬರಿಗೈಯಲ್ಲೇ ಕಿತ್ತು ಬರ್ತಿದೆ ₹50 ಲಕ್ಷ ವ್ಯಯಿಸಿದ ಡಾಂಬರು! - etv bharat karnataka
🎬 Watch Now: Feature Video
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರ ತೀರ್ಥಹಳ್ಳಿಯ ಹೊರಣಿ ಗ್ರಾಮದಿಂದ ಜಿಗಳಗೂಡು ಗ್ರಾಮದ ಕಡೆ ಸಾಗುವ ಡಾಂಬರು ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿದ್ದು ಬರಿಗೈಯಲ್ಲೇ ಕಿತ್ತು ಬರುತ್ತಿದೆ. ರಸ್ತೆಯನ್ನು ಗುತ್ತಿಗೆದಾರ ನಾಗೇಶ್ ಎಂಬುವವರು 10 ದಿನಗಳ ಹಿಂದೆ ಎರಡು ಕಿ.ಮೀ ವರೆಗೆ ನಿರ್ಮಿಸಿದ್ದರು. ರಸ್ತೆಯನ್ನು ಆರಗ ಜ್ಞಾನೇಂದ್ರರ ಕ್ಷೇತ್ರದ ಅನುದಾನದಲ್ಲಿ ನಿರ್ಮಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆಗೆ ರೈತರಿಂದ ವಿರೋಧ: ಫೆ.5ಕ್ಕೆ ಬೃಹತ್ ಪ್ರತಿಭಟನೆ
Last Updated : Feb 3, 2023, 8:40 PM IST