ಒಂದೇ ದಿನಕ್ಕೆ ಕಿತ್ತೋದ ಮಂಗಳೂರು - ಮುತ್ತಾಳ ರಸ್ತೆ.. ಕಳಪೆ ಕಾಮಗಾರಿ ಆರೋಪ
🎬 Watch Now: Feature Video
ಕೊಪ್ಪಳ: ಕಳಪೆ ಕಾಮಗಾರಿ ವೇಳೆ ಹಾಕಿದ್ದ ಡಾಂಬರ್ ಒಂದೇ ದಿನದಲ್ಲಿ ಕಿತ್ತು ಹೋಗಿರುವ ಆರೋಪ ಪ್ರಕರಣ ಜಿಲ್ಲೆಯ ಕುಕನೂರ ತಾಲೂಕಿನ ಮಂಗಳೂರು ಹಾಗೂ ಮುತ್ತಾಳ ರಸ್ತೆ ನಡೆದಿದೆ. ಕಳಪೆ ಕಾಮಗಾರಿ ಆರೋಪ ಕೇಳಿಬಂದಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಂದಾಜು 1 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದೆ. ನಿಯಮಾನುಸಾರವಾಗಿ ಕಾಮಗಾರಿ ಮಾಡದೆ ಇರೋದಕ್ಕೆ ಡಾಂಬರ್ ಕಿತ್ತು ಬರುತ್ತಿದೆ. ಸರ್ಕಾರದ ಹಣ ಪೋಲು ಮಾಡಿರುವ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Last Updated : Feb 3, 2023, 8:34 PM IST