ಚೆಂಡೆವಾದ್ಯ ಬಾರಿಸಿ ಅಭ್ಯರ್ಥಿ ಪರ ಮತಯಾಚಿಸಿದ ರಾಘವ್ ಚಡ್ಡಾ - karnataka assembly election2023

🎬 Watch Now: Feature Video

thumbnail

By

Published : Apr 20, 2023, 8:58 AM IST

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೂಡ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬುಧವಾರ ಪುಲಕೇಶಿನಗರದ ಪಕ್ಷದ​ ಅಭ್ಯರ್ಥಿ ಸುರೇಶ್ ರಾಥೋಡ್ ಅವರನ್ನು ಬೆಂಬಲಿಸಿ ಮತ ಯಾಚಿಸಿದರು. ಪ್ರಚಾರಕ್ಕೂ ಮುನ್ನ ರಾಘವ್ ಚಡ್ಡಾ ಸಾಂಪ್ರದಾಯಿಕ ಚೆಂಡೆವಾದ್ಯ ಬಾರಿಸುವ ಮೂಲಕ ಪ್ರಚಾರ ಆರಂಭಿಸಿದರು. ಈ ವೇಳೆ ಆಪ್​ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಇನ್ನು ಈಗಾಗಲೇ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳು ತಮ್ಮ ಪಕ್ಷದ ಸ್ಟಾರ್​ ಪ್ರಚಾರಕರನ್ನು ಪ್ರಕಟಿಸಿವೆ. ಈ ಮೂಲಕ ಈ ಬಾರಿಯ ಚುನಾವಣೆಯನ್ನು ರಂಗೇರಿಸಿದೆ. ಇನ್ನು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನಾಂಕವಾಗಿದೆ. 

ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್​ ಶೋ: ನಟ ಸುದೀಪ್​, ನಡ್ಡಾ ಜತೆಗೆ ಬಂದು ನಾಮಪತ್ರ ಸಲ್ಲಿಕೆ​.. ಕಾಂಗ್ರೆಸ್​​ ಅಂದರೆ ಭ್ರಷ್ಟಾಚಾರ ಎಂದು ನಡ್ಡಾ ವಾಗ್ದಾಳಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.