Video ನೋಡಿ... ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರ ರಕ್ಷಣೆ - ಕಾಸರಕೋಡು ಬಂದರು ಪ್ರದೇಶ
🎬 Watch Now: Feature Video
ಕಾರವಾರ: ತಾಂತ್ರಿಕ ದೋಷದಿಂದ ಮುಳುಗುತ್ತಿದ್ದ ಬೋಟ್ನಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಹೊನ್ನಾವರ ಬಳಿಯ ಸಮುದ್ರ ತೀರದಲ್ಲಿ ನಡೆದಿದೆ. ತಾಲೂಕಿನ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಜೈ ಭಾರತ್ ಆಳಸಮುದ್ರ ಮೀನುಗಾರಿಕಾ ಬೋಟು ಮುಳುಗುವ ಹಂತದಲ್ಲಿತ್ತು. ಈ ವೇಳೆ, ರಕ್ಷಣೆಗಾಗಿ ಇತರ ಬೋಟ್ಗಳಿಗೆ ಸಂದೇಶ ರವಾನಿಸಿದ್ದು, ಹತ್ತಿರದಲ್ಲಿದ್ದ ಲಲಿತ್ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿದೆ. ಅಷ್ಟೇ ಅಲ್ಲದೆ, ಮುಳುಗುತ್ತಿದ್ದ ಬೋಟ್ ಅನ್ನು ಕಟ್ಟಿಕೊಂಡು ಹೊನ್ನಾವರದ ಕಾಸರಕೋಡು ಬಂದರಿಗೆ ಎಳೆ ತರಲಾಗಿದೆ.
ಕಾಸರಕೋಡು ಬಂದರು ಪ್ರದೇಶದಲ್ಲಿ ಸಾಕಷ್ಟು ವರ್ಷಗಳಿಂದ ಹೂಳು ತುಂಬಿಕೊಂಡಿದ್ದು, ಮೀನುಗಾರಿಕೆ ನಡೆಸಿಕೊಂಡು ಬೋಟುಗಳು ಬಂದರಿಗೆ ವಾಪಸ್ ಆಗಲು ಪರದಾಡುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮತ್ಸೋದ್ಯಮ ಆಧುನೀಕರಣ: ಕರಾವಳಿಯಲ್ಲಿ ಪ್ರಯೋಜನಕ್ಕೆ ಬಾರದ ಲಾಂಗ್ ಲೈನರ್ ಬೋಟ್ಗಳು!