ಮೈಸೂರು: ಸಾಯಿಬಾಬಾ ಮಡಿಲಲ್ಲಿ ಕುಳಿತಿದ್ದ ನಾಗರಹಾವಿನ ರಕ್ಷಣೆ- ವಿಡಿಯೋ - ಈಟಿವ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/06-11-2023/640-480-19956003-thumbnail-16x9-vny.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Nov 6, 2023, 6:16 PM IST
ಮೈಸೂರು: ಮೈಸೂರಿನ ಶ್ರೀನಗರ ಶ್ರೀ ಸಾಯಿ ಮಂದಿರದಲ್ಲಿ ಸಾಯಿಬಾಬಾ ವಿಗ್ರಹಕ್ಕೆ ಅಲಂಕರಿಸಿದ್ದ ವಸ್ತ್ರದೊಳಗೆ ಅವಿತು ಕುಳಿತಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಸಾಯಿಬಾಬ ವಿಗ್ರಹದಲ್ಲಿ ಕುಳಿತಿದ್ದ ಹಾವನ್ನು ಗಮನಿಸಿದ ದೇವಾಲಯದ ಅರ್ಚಕರು, ಉರುಗ ರಕ್ಷಕ ಶಿವಕುಮಾರ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಶಿವಕುಮಾರ್, ಮೂರು ಅಡಿ ಇದ್ದ ನಾಗರಹಾವನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಡಲು ತೆಗೆದುಕೊಂಡು ಹೋದರು. ಮೈಸೂರಿನಲ್ಲಿ ಮಳೆ ಹಿನ್ನೆಲೆ ಬಿಲಗಳು ಹಾಗೂ ಚರಂಡಿಗಳಲ್ಲಿ ನೀರು ಜಾಸ್ತಿ ಆಗಿ ಉಸಿರಾಡಲು ಆಗದೆ ಹಾವುಗಳು ಮೇಲೆ ಬರುತ್ತಿವೆ ಎಂದು ಉರಗ ರಕ್ಷಕ ಶಿವಕುಮಾರ್ ಹೇಳಿದ್ದಾರೆ.
ತುಮಕೂರಿನಲ್ಲೂ ಇಂತಹದ್ದೇ ಘಟನೆ: ಆಹಾರ ಅರಸಿ ಮನೆಯೊಂದಕ್ಕೆ ನುಗ್ಗಿದ ನಾಲ್ಕು ಅಡಿ ಉದ್ದದ ನಾಗರ ಹಾವು ದೇವರ ಕೋಣೆಯಲ್ಲಿ ಅಡಗಿ ಕುಳಿತಿದ್ದ ಘಟನೆ ಇತ್ತೀಚೆಗೆ ತಮಕೂರಿನಲ್ಲಿ ನಡೆದಿತ್ತು. ದೇವರ ಮನೆಯಲ್ಲಿ ಪೂಜೆ ಮಾಡಲು ಬಂದ ಸಿದ್ದರಾಜು ಎಂಬುವರು ಅವಿತು ಕುಳಿತಿದ್ದ ನಾಗರ ಹಾವನ್ನು ಕಂಡಿದ್ದರು. ಕೂಡಲೇ ವಾರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯ ಉರಗ ತಜ್ಞ ದಿಲೀಪ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ್ದ ದಿಲೀಪ್ ನಾಗರಹಾವನ್ನು ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು.
ಇದನ್ನೂ ಓದಿ: Snake in Shoe: ಶೂ ಒಳಗೆ ಅವಿತು ಕುಳಿತಿದ್ದ ಮರಿ ನಾಗರ ಹಾವು ರಕ್ಷಣೆ.. ವಿಡಿಯೋ