ವಿಡಿಯೋ.. ತೋಟದ ನೀರಿನ ಹೊಂಡಗೆ ಬಿದ್ದಿದ್ದ ಕಾಡು ಕೋಣದ ರಕ್ಷಣೆ.. - etv bharat karnataka
🎬 Watch Now: Feature Video
ಕಡಬ:ತಾಲೂಕಿನ ರಾಮಕುಂಜ ಗ್ರಾಮದ ಕಾರಿಜಾಲ್ ಸಾಂತಪ್ಪ ಗೌಡ ಎಂಬವರ ತೋಟದ ನೀರಿನ ಹೊಂಡಕ್ಕೆ ಕಾಡುಕೋಣವೊಂದು ಬಿದ್ದ ಘಟನೆ ನಡೆದಿದೆ. ಹೊಂಡದಲ್ಲಿ ಬಿದ್ದು ಒದ್ದಾಡುತ್ತಿದ್ದ ಕಾಡುಕೋಣವನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಯವರ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹೊಂಡದ ಒಂದು ಭಾಗದ ಮಣ್ಣನ್ನು ತೆಗೆದು ಕಾಡುಕೋಣ ಮೇಲಕ್ಕೆ ಬರಲು ಅನುವು ಮಾಡಿಕೊಟ್ಟರು, ಮೇಲೆ ಬಂದ ಕಾಡುಕೋಣವು ತೋಟದ ಮಧ್ಯೆ ಓಡಿ ಕಾಡಿನತ್ತ ತೆರೆಳಿದೆ.
Last Updated : Feb 3, 2023, 8:35 PM IST