'ಕ್ಲಾಸ್ ಬಂಕ್ ಮಾಡಿ ಸಿನಿಮಾಗೆ ಹೋಗುವ ಜೋಶ್ನಲ್ಲೇ ವೋಟ್ ಮಾಡಿ': ಅವಳಿ ಮಕ್ಕಳ ಮನವಿ
🎬 Watch Now: Feature Video
ಚಾಮರಾಜನಗರ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಾವಿರಾರು ಯುವಕ- ಯುವತಿಯರು ಮೊದಲ ಬಾರಿಗೆ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದಿದ್ದಾರೆ. ಅಂತೆಯೇ ಚಾಮರಾಜನಗರದ ಅವಳಿ ಮಕ್ಕಳಿಬ್ಬರು ಮೊದಲ ಬಾರಿಗೆ ಮತದಾನ ಮಾಡಿದರು.
ಶಿವಾನಿ ಮತ್ತು ಶರಣ್ ಎಂಬ ಅವಳಿ ಮಕ್ಕಳು ತುಮಕೂರು ನಗರದಿಂದ ಚೊಚ್ಚಲ ಮತದಾನಕ್ಕಾಗಿ ಚಾಮರಾಜನಗರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಮೊದಲ ಮತದಾನದ ಖುಷಿ ಹಂಚಿಕೊಂಡರು.
"ಕಾಲೇಜಿನಲ್ಲಿ ಕ್ಲಾಸ್ ಬಂಕ್ ಮಾಡಿ ಫಿಲಂಗೆ ಹೋಗುವ ಜೋಶ್ನಲ್ಲೇ ವೋಟ್ ಕೂಡ ಮಾಡಬೇಕು. ಯುವಕರು ಯಾವತ್ತೂ ಮತದಾನ ಮಿಸ್ ಮಾಡಬಾರದು. ನಮ್ಮಿಚ್ಛೆಯ ನಾಯಕರನ್ನು ಆಯ್ಕೆ ಮಾಡಲು ವೋಟಿಂಗ್ನಿಂದ ಮಾತ್ರವೇ ನಮಗೆ ಸಾಧ್ಯ. ಯುವರ್ ಓಟ್, ಯುವರ್ ಚಾಯ್ಸ್ ಎಂಬ ರೀತಿಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ. ನಿಮ್ಮ ಹಕ್ಕು ಚಲಾಯಿಸಿ" ಎಂದು ಜನತೆಯಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಚಾಮರಾಜನಗರ - ನನ್ನ ಪರವಾಗಿ ನಾನೇ ಮತ ಹಾಕಿದೆ: ಸಂತಸ ವ್ಯಕ್ತಪಡಿಸಿದ ಸಚಿವ ಸೋಮಣ್ಣ