ಮಣಿಪುರದ ಸೂಕ್ಷ್ಮ ಪ್ರದೇಶದಲ್ಲಿ ಭದ್ರತಾ ಪಡೆಗಳ ಧ್ವಜ ಮೆರವಣಿಗೆ, ಬಲ ಪ್ರದರ್ಶನ
🎬 Watch Now: Feature Video
ತೇಜ್‌ಪುರ (ಅಸ್ಸೋಂ): ಅಸ್ಸಾಂ ರೈಫಲ್ಸ್‌ನೊಂದಿಗೆ ಭಾರತೀಯ ಸೇನೆಯು ಮಣಿಪುರದಲ್ಲಿ ಭದ್ರತೆಯನ್ನು ಗಣನೀಯವಾಗಿ ನಿಯೋಜನೆ ಮಾಡಿದೆ. ರಕ್ಷಣಾ ಮೂಲಗಳ ಪ್ರಕಾರ, ವಿಶೇಷವಾಗಿ ಚಾಲ್ತಿಯಲ್ಲಿರುವ ಭದ್ರತಾ ಪಡೆ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸುವ ಕೆಲಸವನ್ನು ಮಾಡ್ತಿದೆ . ಜನರು ಈಗ ತಮ್ಮ ಕುಟುಂಬದವರನ್ನು ಸೇರಲು ಪುನಃ ಮನೆಗೆ ಮರಳುತ್ತಿದ್ದಾರೆ ಎಂದು ತಿಳಿದುಬಂದಿದೆ
ನಿರ್ದಿಷ್ಟವಾಗಿ ಭಾರತೀಯ ಸೇನೆಯು ಒಳನಾಡಿನಲ್ಲಿ ಮಾತ್ರವಲ್ಲದೇ ಇಂಡೋ ಮ್ಯಾನ್ಮಾರ್ ಗಡಿ ಉದ್ದಕ್ಕೂ ಇರುವ ಪ್ರದೇಶಗಳ ಮೇಲೆ ಕಣ್ಗಾವಲು ಇಟ್ಟಿದೆ. ಮಾನವರಹಿತ ವೈಮಾನಿಕ ವಾಹನಗಳ UAV ಮೂಲಕ ಗಡಿ ಕಣ್ಗಾವಲು ಹಾಕಲಾಗಿದೆ. MI 17 ಮತ್ತು ವಾಯುಪಡೆಯ ಚೀತಾ ಹೆಲಿಕಾಪ್ಟರ್‌ಗಳ ಮೂಲಕ ಹದ್ದಿನ ಕಣ್ಟಿಟ್ಟಿದೆ. ಅಷ್ಟೇ ಅಲ್ಲ ಸ್ಥಳೀಯರ ವಿಶ್ವಾಸವನ್ನು ಪುನಃಸ್ಥಾಪಿಸಲು ಸೂಕ್ಷ್ಮ ಪ್ರದೇಶದಲ್ಲಿ ಧ್ವಜ ಮೆರವಣಿಗೆ ನಡೆಸಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ. ಒಟ್ಟು 128 ಸೇನಾ ತುಕಡಿಗಳನ್ನು ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ನಿಯೋಜಿಲಾಗಿದೆ.
ಇದನ್ನೂ ಓದಿ: ಮ್ಯಾನ್ಮಾರ್ನ ಅಕ್ರಮ ವಲಸಿಗರಿಂದ ಮಣಿಪುರದಲ್ಲಿ ಹಿಂಸಾಚಾರ: ಮೆತೈ ಸಮುದಾಯ ಆರೋಪ