ಕಿಷ್ಕಿಂದೆಯಿಂದ ಅಯೋಧ್ಯೆಗೆ ತಲುಪಿದ ಹನುಮಂತನ ರಥಯಾತ್ರೆ - Hanuman Birth Place

🎬 Watch Now: Feature Video

thumbnail

By ETV Bharat Karnataka Team

Published : Jan 18, 2024, 11:05 PM IST

ಅಯೋಧ್ಯಾ: ಜನವರಿ 22 ರಂದು ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ. ಮಂದಿರ ಉದ್ಘಾಟನೆಗಾಗಿ ಈಗಿನಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭಗೊಂಡಿವೆ. 22ನೇ ತಾರೀಖಿನಂದು ಮಧ್ಯಾಹ್ನ 12:28 ರಿಂದ 12:30 ಗಂಟೆ ನಡುವೆ  ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಗೊಳ್ಳಲಿದೆ.

ಇದರ ನಡುವೆಯೇ ಹನುಮನ ಜನುಮ ಸ್ಥಳವಾದ ಅಂಜನಾದ್ರಿಯಿಂದ ಹನುಮಂತನ ರಥಯಾತ್ರೆ ವಾಹನ ಅಯೋಧ್ಯೆಗೆ ತಲುಪಿದೆ. ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ 12 ವರ್ಷಗಳಿಂದ ರಥಯಾತ್ರ ಆರಂಭಿಸಿದ್ದು ಇಡೀ ಭಾರತವನ್ನು ಸುತ್ತುತ್ತಿದೆ. ಇಂದು ಈ ರಥಯಾತ್ರೆ ವಾಹನ ಅಯೋಧ್ಯಾ ತಲುಪಿದೆ. ಈ ಯಾತ್ರೆಯ ಮೂಲಕ ಶ್ರೀರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಮೊದಲೇ ಹನುಮಂತನ ರಥವಾಹನ ಅಯೋಧ್ಯೆಗೆ ಕರೆತರುವಲ್ಲಿ ಟ್ರಸ್ಟ್‌ನ ಸದಸ್ಯರು ಯಶಸ್ವಿಯಾಗಿದ್ದಾರೆ.

ಈ ಯಾತ್ರೆಯೊಂದಿಗೆ ಅಯೋಧ್ಯೆಗೆ ಆಗಮಿಸಿದ ಗೋವಿಂದಾನಂದ ಸರಸ್ವತಿ ಮಾತನಾಡಿ, ಕಳೆದ 12 ವರ್ಷಗಳಿಂದ ಈ ಯಾತ್ರೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಉತ್ಸವವಿದೆ. ಇಂತಹ ಸಂದರ್ಭದಲ್ಲಿ ಅವರ ಪರಮ ಭಕ್ತ ಹನುಮಂತ ಈಗಾಗಲೇ ಅಯೋಧ್ಯೆಗೆ ಬಂದು ನೆಲೆಸಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮನ ಜೊತೆಗೆ ಮಂಡ್ಯದ ರಾಮನಿಗೂ ಅರುಣ್ ಯೋಗಿರಾಜ್​ ಶಿಲ್ಪಿ 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.