ಮಳೆ ನೀರಿನಲ್ಲಿ ಮುಳುಗಿದ ಸೇತುವೆ ಮೇಲೆ ಬೈಕ್ ಸವಾರಿ ಮಾಡಿ ಪ್ರಾಣಭಯದಲ್ಲಿ ಸಿಲುಕಿದ ಯುವಕರು- ವಿಡಿಯೋ - ದೇಶದ ವಿವಿದೆಡೆ ಭಾರಿ ಮಳೆ
🎬 Watch Now: Feature Video
ರಾಜಸ್ಥಾನ : ದೇಶದ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಜಡಿ ಮಳೆ ಸುರಿಯುತ್ತಿದ್ದು, ಇಲ್ಲಿನ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನದಿಪಾತ್ರದ ಪ್ರದೇಶಗಳು ಮುಳುಗಡೆಯಾಗಿದ್ದು, ಜನರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ. ಹಲವು ಗ್ರಾಮಗಳಿಗೆ ನೀರು ನುಗ್ಗಿ ದ್ವೀಪ ಸೃಷ್ಟಿಯಾಗಿದೆ.
ರಾಜಸ್ಥಾನದಲ್ಲೂ ಮಳೆಯ ಅಬ್ಬರ ಮುಂದುವರೆದಿದ್ದು, ಇಲ್ಲಿನ ನದಿಗಳು ತುಂಬಿ ಹರಿಯುತ್ತಿವೆ. ಉದಯಪುರ ಜಿಲ್ಲೆಯ ಮೋರ್ವಾನಿಯಾದಲ್ಲಿ ಸೇತುವೆ ಮೇಲೆ ನದಿ ನೀರು ಉಕ್ಕಿದೆ. ಮುಳುಗಡೆಯಾದ ಸೇತುವೆಯಲ್ಲಿ ಬೈಕ್ನಲ್ಲಿ ಚಲಾಯಿಸಿಕೊಂಡು ಬಂದ ಇಬ್ಬರು ಯುವಕರು ಸೇತುವೆಯ ಮಧ್ಯೆ ಸಿಲುಕಿದ್ದರು. ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದರೂ ಲೆಕ್ಕಿಸದೇ ಬೈಕ್ ಚಲಾಯಿಸಿದ್ದೇ ಇದಕ್ಕೆ ಕಾರಣವಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಭದ್ರತಾ ಪಡೆಗಳು ಕ್ರೇನ್ ಸಹಾಯದಿಂದ ಇಬ್ಬರನ್ನೂ ರಕ್ಷಿಸಿದರು.
ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಇದನ್ನೂ ಓದಿ : ನೋಯ್ಡಾದಲ್ಲಿ 400ಕ್ಕೂ ಹೆಚ್ಚು ವಾಹನಗಳು ಜಲಾವೃತ! ಈ ದೃಶ್ಯವನ್ನೊಮ್ಮೆ ನೋಡಿ