ದೆಹಲಿಯ ಹಲವೆಡೆ ಮಳೆ, ವಾಯು ಮಾಲಿನ್ಯದಿಂದ ಮುಕ್ತಿ ಸಿಗುವ ಭರವಸೆ- ವಿಡಿಯೋ - ಹವಾಮಾನ ಇಲಾಖೆ

🎬 Watch Now: Feature Video

thumbnail

By ETV Bharat Karnataka Team

Published : Nov 10, 2023, 11:38 AM IST

ನವದೆಹಲಿ: ದೆಹಲಿ, ನೋಯ್ಡಾ, ಗಾಜಿಯಾಬಾದ್​ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹವಾಮಾನದಲ್ಲಿ ದಿಢೀರ್​ ಬದಲಾವಣೆಯಾಗಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದ ನಡುವೆ ಗುರುವಾರ ರಾತ್ರಿ, ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಿತು. ಒಂದೆಡೆ ಮಳೆಯಿಂದ ವಾಯುಮಾಲಿನ್ಯದಿಂದ ಜನತೆಗೆ ಮುಕ್ತಿ ಸಿಕ್ಕರೆ, ಮತ್ತೊಂದೆಡೆ ತಾಪಮಾನ ಕುಸಿತದಿಂದ ಚಳಿಯೂ ಹೆಚ್ಚಾಗಿದೆ.

ದೆಹಲಿಯಲ್ಲಿ ಶುಕ್ರವಾರವೂ ಮೋಡ ಕವಿದ ವಾತಾವರಣವಿದ್ದು, ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುರುವಾರ ರಾಜಧಾನಿಯಲ್ಲಿ 24 ಗಂಟೆಗಳ ಸರಾಸರಿ AQI 437 ಆಗಿತ್ತು. ಇದು ತೀವ್ರ ವಿಭಾಗದಲ್ಲಿ ಬರುತ್ತದೆ. ದೀಪಾವಳಿಯ ಮೊದಲು ಈ ಮಳೆ ದೆಹಲಿ ಜನರಿಗೆ ವರವಾಗಿ ಪರಣಮಿಸಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಬೇಸತ್ತಿದ್ದ ದೆಹಲಿ ಜನರಿಗೆ ಮಳೆಯ ಕೃಪೆಯಿಂದ ಮಾಲಿನ್ಯ ಕಡಿಮೆಯಾಗಿ ಆಕಾಶ ತಿಳಿಯಾಗಲಿದೆ ಎಂಬ ಆಶಾಭಾವ ಮೂಡಿದೆ.

ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಟ್ಟ ಮಾರಣಾಂತಿಕವಾಗುತ್ತಿದೆ. ರಾಜಧಾನಿ ಮಾತ್ರವಲ್ಲ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿದೆ. ಶಾಲೆಗಳನ್ನು ಮುಚ್ಚಿದ್ದು, ನವೆಂಬರ್ 13ರಿಂದ ಸಮ-ಬೆಸ ನಿಯಮವನ್ನು ಜಾರಿಗೆ ತರಲು ಸಿದ್ಧತೆಗಳು ನಡೆದಿವೆ. ಪರಿಸ್ಥಿತಿ ತುಂಬಾ ಹದಗೆಟ್ಟಿರುವುದರಿಂದ ನವೆಂಬರ್ 20 ಅಥವಾ 21ರಂದು ಕೃತಕ ಮಳೆ ಸುರಿಯುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಪ್ರಸ್ತುತ ದೆಹಲಿಯಲ್ಲಿ ಭಾರಿ ಮಳೆಯಾಗಿರುವುದರಿಂದ ವಾಯು ಮಾಲಿನ್ಯದಿಂದ ಕೊಂಚ ಪರಿಹಾರ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವ ಪ್ರಮಾಣ ಅತಿ ಹೆಚ್ಚು

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.