thumbnail

By

Published : Mar 18, 2023, 8:08 PM IST

Updated : Mar 18, 2023, 11:06 PM IST

ETV Bharat / Videos

ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ: ಆರ್​ ಅಶೋಕ್

ತುಮಕೂರು: ಕೋಲಾರದಲ್ಲಿ ಈಗಾಗಲೇ ಉರಿಗೌಡ ಹಾಗೂ ನಂಜೇಗೌಡ ಬೆಂಕಿ ಹತ್ತಿಕೊಂಡಿರುವುದರಿಂದ ಅಲ್ಲಿಂದ ಸಿದ್ದರಾಮಯ್ಯ ಜಾಗ ಖಾಲಿ ಮಾಡಲಿದ್ದಾರೆ ಎಂದು ಸಚಿವ ಆರ್ ಅಶೋಕ್ ಹೇಳಿದರು. ತಿಪಟೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಭಯ ಶುರುವಾಗಿದೆ. ಮೈಸೂರಿನಲ್ಲಿ ಒಕ್ಕಲಿಗರು ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ, ಕೋಲಾರದಲ್ಲಿ ಕೈ ಕೊಡಲಿದ್ದಾರೆ ಎಂಬ ಆತಂಕ ಸಿದ್ದರಾಮಯ್ಯ ಅವರಿಗೆ ಎದುರಾಗಿದೆ ಎಂದು ಹೇಳಿದರು.

ನನಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಇನ್ನೂ ಕೂಡ ಅವರು ಅಲೆಯಬೇಕಿದೆ, ನನ್ನ ಪ್ರಕಾರ ರಾಜ್ಯದ 224 ಕ್ಷೇತ್ರಗಳು ಕೂಡ ಅವರಿಗೆ ಸೇಫ್ ಅಲ್ಲ. ಅವರು ಅಫ್ಘಾನಿಸ್ತಾನ, ಇರಾನ್ ಅಥವಾ ಇರಾಕಿಗೆ ಹೋದರೆ ಒಳ್ಳೆಯದು. ಎಲ್ಲಿಯವರೆಗೆ ಅವರು ಟಿಪ್ಪು ಟಿಪ್ಪು ಎಂದು ಹೇಳುತ್ತಾರೆಯೋ ಅಲ್ಲಿಯವರೆಗೂ ಅವರಿಗೆ ಕರ್ನಾಟಕ ಸೇಫ್ ಅಲ್ಲ. ಟಿಪ್ಪು ಎಂದು ಹೇಳುವುದನ್ನು ಬಿಟ್ಟರೆ ಅವರಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ಒಂದು ಸುರಕ್ಷಿತವಾದ ಕ್ಷೇತ್ರ ಲಭಿಸಲಿದೆ. ಎಲ್ಲಿವರೆಗೂ ಟಿಪ್ಪುನನ್ನು ಬಿಡಲ್ಲ, ಶಾದಿ ಭಾಗ್ಯವನ್ನು ಬಿಡಲ್ಲ ಅಲ್ಲಿವರೆಗೂ ಅವರು ಗೆಲ್ಲಲ್ಲ ಎಂದು ಆರ್​ ಅಶೋಕ್ ವ್ಯಂಗ್ಯವಾಡಿದರು.

ಇದನ್ನೂ ಓದಿ:ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾ ಬಂದ್: ಬಸನಗೌಡ ಪಾಟೀಲ್ ಯತ್ನಾಳ್

ಸಿದ್ದರಾಮಯ್ಯ ಅವರಿಗೆ ಕ್ಷೇತ್ರವನ್ನು ಹುಡುಕಾಡಿಕೊಂಡು ಸ್ಪರ್ಧಿಸಬೇಕಾದಂತಹ ಪರಿಸ್ಥಿತಿ ಬರಬಾರದಿತ್ತು-ಮಾಧುಸ್ವಾಮಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ರೀತಿ ಕ್ಷೇತ್ರವನ್ನು ಹುಡುಕಾಡಿಕೊಂಡು ಸ್ಪರ್ಧಿಸಬೇಕಾದಂತಹ ಪರಿಸ್ಥಿತಿ ಪಾಪ ಬರಬಾರದಿತ್ತು ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು ಎಂದರು. ​ 

ಕೋಲಾರ ಸರಿಯಾದ ಸ್ಥಳವಾಗಿರಲಿಲ್ಲ. ಅವರು ಕೊನೆಗೆ ವರುಣಾದಲ್ಲಿ ಸ್ಪರ್ಧೆ ಮಾಡ್ತಾರೆ ಅಂತಾ ನಾವು ತಿಳಿದುಕೊಂಡಿದ್ದೇವೆ ಎಂದು ಹೇಳಿದರು.
ಪ್ರಸ್ತುತ ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರು ಸಿದ್ದರಾಮಯ್ಯ ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸುರಕ್ಷಿತವಾಗಿಲ್ಲ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ ನಮ್ಮ ಕಾರ್ಯಕ್ರಮಗಳಿಗೆ ಕಾರ್ಯಕರ್ತರು ಹಾಗೂ ಜನರು ಸ್ಪಂದಿಸಿದ್ದಾರೆ. ಹೀಗಾಗಿ ನಮ್ಮ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ. ಕ್ಷೇತ್ರದಲ್ಲಿ ನನಗೆ ಎದುರಾಳಿಗಳು ಇದಾರೆ ಅಂತಾ ಅಂದುಕೊಂಡಿಲ್ಲ. ನನ್ನ ದೃಷ್ಟಿಯಲ್ಲಿ ಚುನಾವಣೆ ಇರೋದು ಗೆಲ್ಲೋದು, ಮಿಕ್ಕಿದವರನ್ನ ಕಟ್ಟಿಕೊಂಡು ನನಗೆ ಏನಾಗಬೇಕಿದೆ ಎಂದು ಹೇಳಿದರು.

Last Updated : Mar 18, 2023, 11:06 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.