thumbnail

By

Published : Mar 13, 2023, 5:09 PM IST

ETV Bharat / Videos

ಚಲೋ ರಾಜಭವನ್​ .. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

ಚಂಡೀಗಢ : ಮೋದಿ ಸರ್ಕಾರದ ಧೋರಣೆಗಳನ್ನು ಖಂಡಿಸಿ ಪಂಜಾಬ್​ ಕಾಂಗ್ರೆಸ್​​ ಅಧ್ಯಕ್ಷ ರಾಜಾ ವಾರಿಂಗ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ, ಪಂಜಾಬ್​ನ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್​ ನಾಯಕರು ಮತ್ತು ಕಾಯಕರ್ತರನ್ನು ಪೊಲೀಸರು ತಡೆದರು. ಈ ಸಂದರ್ಭ ಪ್ರತಿಭಟನಾಕಾರರನ್ನು ಜಲಫಿರಂಗಿಗಳನ್ನು ಬಳಸಿ ನಿಯಂತ್ರಿಸಲಾಯಿತು. ಜೊತೆಗೆ ಕೆಲ ಕಾಂಗ್ರೆಸ್​ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಮೊದಲಿನಿಂದಲೂ ಬಿಜೆಪಿಯು ಅದಾನಿಯನ್ನು ಬೆಂಬಲಿಸಿ ಇದರ ಲಾಭವನ್ನು ಪಡೆಯುತ್ತಿದೆ. ಅದಾನಿ ವಿಚಾರವಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದು, ಬಂಡವಾಳಶಾಹಿ ಗೌತಮ್ ಅದಾನಿಯ ನೀತಿಗಳ ವಿರುದ್ಧ ‘ಚಲೋ ರಾಜಭವನ’ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಜಾ ವಾರಿಂಗ್ ತಿಳಿಸಿದರು.

ಇನ್ನು, ಪ್ರತಿಭಟನಾಕಾರರು ರಾಜಭವನಕ್ಕೆ ಮುತ್ತಿಗೆ ಹಾಕದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಈ ವೇಳೆ ಬ್ಯಾರಿಕೇಡ್​ಗಳನ್ನು ದಾಟಿ ಬಂದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮೋದಿ ಸರ್ಕಾರ ಮುರ್ದಾಬಾದ್ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾಂಗ್ರೆಸ್​​ ಕಾರ್ಯಕರ್ತರೂ ಭಾಗಿಯಾಗಿದ್ದರು.

ಈ ವೇಳೆ ಚಂಡೀಗಢ ಕಾಂಗ್ರೆಸ್ ಅಧ್ಯಕ್ಷ ಹರ್ಮೊಹಿಂದರ್ ಸಿಂಗ್ ಲಕ್ಕಿ ಮಾತನಾಡಿ, ಏರುತ್ತಿರುವ ಹಣದುಬ್ಬರದಿಂದ ಚಂಡೀಗಢ ಸೇರಿದಂತೆ ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕರು ತೊಂದರೆಗೀಡಾಗಿದ್ದಾರೆ. ಜನರಿಗಾಗಿ ಕಾಂಗ್ರೆಸ್‌ನ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.

ಇದನ್ನೂ ಓದಿ : ರಸ್ತೆಯಲ್ಲಿ ಅಮ್ಮ ಮಕ್ಕಳ ಸವಾರಿ: ಕೆ.ಗುಡಿಯಲ್ಲಿ ಹುಲಿಗಳ ದರ್ಬಾರ್ ನೋಡಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.