ಪುನೀತ್ ಕಟೌಟ್ಗೆ ಹಾಲಿನ ಅಭಿಷೇಕ - ಬೆಳಗಾವಿಯಲ್ಲಿ ಅಪ್ಪು ಅಭಿಮಾನಿಗಳಿಂದ ಸಸಿ ವಿತರಣೆ - ಅಪ್ಪು ಅಭಿಮಾನಿಗಳಿಂದ ಸಸಿ ನೀಡುವ ಕಾರ್ಯಕ್ರಮ
🎬 Watch Now: Feature Video
ಬೆಳಗಾವಿ: ಪವರ್‌ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬೆಳಗಾವಿಯ ಮೂರು ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಸ್ವರೂಪ - ನರ್ತಕಿ, ಕಾರ್ನಿವಲ್ ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಚಿತ್ರಮಂದಿರಗಳನ್ನ ಅಪ್ಪು ಅಭಿಮಾನಿಗಳು ನವವಧುವಿನಂತೆ ಸಿಂಗರಿಸಿದ್ದು, ಪುನೀತ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇಂದು ಮಧ್ಯಾಹ್ನ 12.30ಕ್ಕೆ ಅಪ್ಪು ಅಭಿಮಾನಿಗಳಿಂದ ಸಸಿ ನೀಡುವ ಕಾರ್ಯಕ್ರಮ ಹಾಗೂ ಚಿತ್ರ ವೀಕ್ಷಿಸಲು ಆಗಮಿಸುವವರಿಗೆ ಸಸಿ ವಿತರಣೆ ಕಾರ್ಯಕ್ರಮ ಕೂಡ ನಡೆಯಲಿದೆ.
Last Updated : Feb 3, 2023, 8:30 PM IST