ಭಟ್ಕಳದಲ್ಲಿ ಮೊಗೇರ ಸಮಾಜದಿಂದ ಪ್ರತಿಭಟನೆ : ಜಿಲ್ಲಾಧಿಕಾರಿಗಳಿಗೆ ಘೇರಾವ್ - ETV Bharat kannada News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18064659-thumbnail-16x9-mh.jpg)
ಭಟ್ಕಳ (ಉತ್ತರ ಕನ್ನಡ) : ತಾಲೂಕಾ ಆಡಳಿತ ಸೌಧದಲ್ಲಿ ಮೊಗೇರ ಸಮಾಜದ ಪ್ರತಿಭಟನೆ ವೇಳೆ ಕೆಲ ಪ್ರತಿಭಟನಕಾರರು ಜಿಲ್ಲಾಧಿಕಾರಿ ಪ್ರಭುಲಿಂಗ ಗವಳಿಕಟ್ಟೆ ಕಾರಿನ ಮುಂಭಾಗ ಕುಳಿತು ಅಡ್ಡ ಹಾಕಿದ ಘಟನೆ ನಡೆದಿದೆ. ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮೊಗೇರ ಸಮಾಜದವರು ಒಂದು ವರ್ಷದಿಂದ ತಾಲೂಕಾ ಆಡಳಿತ ಸೌಧದ ಸಮೀಪ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ವರ್ಷ ಪ್ರತಿಭಟನೆ ನಡೆಸಿದರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲವೆಂದು ಆರೋಪಿಸಿ ಇಂದು ತಾಲೂಕಾಡಳಿತದ ಮುಂದೆ ಧರಣಿ ಕುಳಿತಿದ್ದರು. ಅಲ್ಲದೆ, ಜಿಲ್ಲಾಧಿಕಾರಿ ಮನವಿ ಸ್ವೀಕರಿಸುವಂತೆ ಒತ್ತಾಯಿಸಿದರು. ಈ ಹಿನ್ನೆಲೆ ಕಾರವಾರದಿಂದ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳು ಆಗಮಿಸಿದರು.
ಬಳಿಕ ಈ ವೇಳೆ ಸಮಾಜದ ಮುಖಂಡರು ಹಾಗೂ ಪ್ರತಿಭಟನಕಾರರು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಆಕ್ರೋಶ ಹೊರಹಾಕಿ ತಮ್ಮ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿಗಳು ಪ್ರತಿಭನಕಾರರನ್ನು ಉದ್ದೇಶಿಸಿ ಮಾತನಾಡಿ ಅಲ್ಲಿಂದ ತಾಲೂಕಾ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದರು. ಈ ವೇಳೆ ಪಾರ್ಕಿಂಗ್ ನಲ್ಲಿದ್ದ ಡಿಸಿ ಕಾರಿನ ಮುಂಭಾಗ ಕುಳಿತು ಅಡ್ಡ ಹಾಕಿ ಘೋಷಣೆ ಕೂಗಿದರು. ಇದನ್ನು ಗಮನಿಸಿದ ಡಿ.ವೈ.ಎಸ್ಪಿ ಶ್ರೀಕಾಂತ ಅವರು ಕೂಡಲೇ ಸ್ಥಳಕ್ಕೆ ಬಂದು ಪ್ರತಿಭಟನನಾಕಾರನ್ನು ಅಲ್ಲಿಂದ ಚದುರಿಸಿದರು.
ಇದನ್ನೂ ಓದಿ :ಸೀರೆ ಹಂಚಲು ಬಂದವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ: ವಿಡಿಯೋ ವೈರಲ್