ಮುಂದಿನ ಬಾರಿಯೂ ಪಶುಸಂಗೋಪನೆ ಖಾತೆಯನ್ನೇ ಬಯುಸುವೆ: ಪ್ರಭು ಚವ್ಹಾಣ್ - prabhu chauhan talk in bidar
🎬 Watch Now: Feature Video
ಬೀದರ್: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ನಾನು ಪಶುಸಂಗೋಪನೆ ಖಾತೆ ಬಯಸುತ್ತೇನೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು. ನಗರದಲ್ಲಿ ನಡೆದ ಪಶು ಸಂಜೀವಿನಿ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೊದಲ ಬಾರಿ ನಾನು ಸಚಿವನಾಗುವಾಗ ಪಶು ಸಂಗೋಪನೆ ಖಾತೆ ಬೇಕು ಎಂದು ಮನವಿ ಮಾಡಿದ್ದೆ. ಎರಡನೇ ಸಲ ಸಚಿವನಾದಾಗಲೂ ಈ ಖಾತೆ ಬೇಕು ಎಂದು ಕೇಳಿ ಪಡೆದಿದ್ದೇನೆ" ಎಂದರು.
ಇದೇ ವೇದಿಕೆ ಮೇಲಿದ್ದ ಕಾಂಗ್ರೆಸ್ ಶಾಸಕ ರಹೀಂಖಾನ್ ಮಾತನಾಡಿ, "ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಾರದೇ ಇದ್ದಲ್ಲಿ ನಾನು ಇದೇ ಇಲಾಖೆಗೆ ಮಂತ್ರಿಯಾಗಲಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ಮೈಸೂರಿನಲ್ಲಿ 'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಚಾಲನೆ
Last Updated : Feb 3, 2023, 8:39 PM IST