ಭಯಾನಕ ವಿಡಿಯೋ.. ಸ್ಕೂಟಿಗೆ ಬಲವಾಗಿ ಡಿಕ್ಕಿ ಹೊಡೆದ ಸಫಾರಿ ಕಾರು... - ಹಲ್ದ್ವಾನಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆ
🎬 Watch Now: Feature Video
ಹಲ್ದ್ವಾನಿ (ಉತ್ತರಾಖಂಡ) : ಇಲ್ಲಿನ ಮುಖಾನಿ ರಸ್ತೆಯಲ್ಲಿ ಸಫಾರಿ ಕಾರೊಂದು ಸ್ಕೂಟಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಬಹುದೂರಕ್ಕೆ ಹೋಗಿ ಬಿದ್ದಿದೆ. ಈ ಅಪಘಾತದಲ್ಲಿ ಹರ್ಷಿತಾ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಆದರೆ, ಮತ್ತೊಬ್ಬ ಬಾಲಕಿ ಗಾಯಗೊಂಡಿದ್ದಾಳೆ. ಸದ್ಯ ಹಲ್ದ್ವಾನಿ ಸುಶೀಲಾ ತಿವಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಹಲ್ದ್ವಾನಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆ: ಮುಖಾನಿಯ ಉದ್ಯಮಿ ಸಂಜೀವ್ ವರ್ಮಾ ಅವರ ಪುತ್ರಿ ಹರ್ಷಿತಾ ವರ್ಮಾ ಕಳೆದ (ಬುಧವಾರ) ಹೋಳಿ ದಿನದಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಆದರೆ, ಆಕೆಯ ಸ್ನೇಹಿತೆ ಲವಿ ಜೋಶಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಈ ಅಪಘಾತದ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸಫಾರಿ ಕಾರು ಮುಖಾನಿ ಛೇದಕದಿಂದ ಸುಶೀಲಾ ತಿವಾರಿ ಕಡೆಗೆ ಬರುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ವೇಳೆ ಹರ್ಷಿತಾ ವರ್ಮಾ ತನ್ನ ಸ್ನೇಹಿತೆಯನ್ನು ಮನೆಗೆ ಬಿಡಲು ಸ್ಕೂಟಿಯಲ್ಲಿ ಮುಖಾನಿ ಕಡೆಗೆ ಹೋಗುತ್ತಿದ್ದರು. ನಂತರ ಮುಖಾನಿ ರಸ್ತೆಯ ಕೆವಿಎಂ ಶಾಲೆ ಬಳಿ ಮಧ್ಯಾಹ್ನ 12: 09 ರ ಸುಮಾರಿಗೆ ಸಫಾರಿ ಕಾರೊಂದು ಸ್ಕೂಟಿಗೆ ಮುಂಭಾಗದಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಕೂಟಿ ನೆಲದ ಮೇಲೆ ಬಿದ್ದಿದೆ. ತರುವಾಯ ರಸ್ತೆಯ ಮೇಲೆ ಉಜ್ಜಿಕೊಂಡು ಹಲವಾರು ಮೀಟರ್ ದೂರ ಹೋಗುತ್ತದೆ.
ಸಫಾರಿ ಕಾರಿನ ಮೇಲೆ ಪೊಲೀಸ್ ಎಂದು ಬರೆಯಲಾಗಿದೆ: ಮತ್ತೊಂದೆಡೆ ಸಫಾರಿ ಕಾರಿನ ಮೇಲೆ ಪೊಲೀಸ್ ಎಂದು ಬರೆಯಲಾಗಿದೆ. ಹೀಗಿರುವಾಗ ಪೊಲೀಸರ ಮೇಲೂ ಪ್ರಶ್ನೆಗಳು ಮೂಡುತ್ತಿವೆ. ಸಫಾರಿ ಕಾರು ಸಬ್ ಇನ್ಸ್‌ಪೆಕ್ಟರ್‌ಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಆಟೋ ಡೀಲರ್‌ಗೆ ಮಾರಾಟ ಮಾಡಲಾಗಿತ್ತು. ಈ ಕಾರು ಇನ್ನೂ ಪೊಲೀಸರ ಹೆಸರಲ್ಲೇ ಇದೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ : ಡ್ರೈವಿಂಗ್ ನಲ್ಲಿರುವಾಗಲೇ ಚಾಲಕನಿಗೆ ಫಿಟ್ಸ್: ಪೆಟ್ರೋಲ್ ಪಂಪ್ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ