ಶಿವಮೊಗ್ಗದಲ್ಲಿ ಆಟೋ ಮೀಟರ್ ಡ್ರೈವ್ ನಡೆಸಿದ ಪೊಲೀಸರು: ಚಾಲಕರಿಗೆ ಖಡಕ್ ವಾರ್ನಿಂಗ್
🎬 Watch Now: Feature Video
ಶಿವಮೊಗ್ಗ : ಆಟೋಗಳಿಗೆ ಮೀಟರ್ ಹಾಕದೇ ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂದು ದೂರುಗಳು ಬಂದ ಹಿನ್ನೆಲೆ ನಿನ್ನೆ ಸಂಜೆ ನಗರದ ಗೋಪಿ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಟ್ರಾಫಿಕ್ ಪೊಲೀಸರು ಆಟೋ ಮೀಟರ್ ಪರಿಶೀಲನಾ ಡ್ರೈವ್ ನಡೆಸಿದರು. ಈ ವೇಳೆ ಅನೇಕ ಆಟೋ ಚಾಲಕರು ಮೀಟರ್ ಇದ್ದರೂ ಹಾಕದೇ, ಹೆಚ್ಚಿನ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು.
"ನಾಳೆಯಿಂದ ಚಾಲಕರು ಮೀಟರ್ ಹಾಕದೆ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದರೆ ಅಂತಹ ಆಟೋಗಳನ್ನು ವಶಕ್ಕೆ ಪಡೆಯಲಾಗುವುದು. ಜೊತೆಗೆ, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತದೆ. ಹಾಗಾಗಿ, ಆಟೋ ಚಾಲಕರು ಮತ್ತು ಮಾಲೀಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು" ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದರು. ಕಳೆದ ವಾರ ಹಾಫ್ ಹೆಲ್ಮೆಟ್ ಡ್ರೈವ್ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್ಪಿ ಸುರೇಶ್, ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್, ಟ್ರಾಫಿಕ್ ಪಿಎಸ್ಐ ತಿರುಮಲೇಶ್ ನಾಯ್ಕ ಉಪಸ್ಥಿತರಿದ್ದರು.
ಇದನ್ನೂ ಓದಿ : ಮಂಡ್ಯ ಡಿಸಿ, ಎಸ್ಪಿ ಅಲರ್ಟ್: ಕರ್ತವ್ಯ ನಿರತ ಅಧಿಕಾರಿಗಳಿಗೆ ವಾರ್ನಿಂಗ್ ; ಪರ್ಮಿಟ್ ಇಲ್ಲದ ಆಟೋ ಚಾಲಕರಿಗೆ ಶಾಕ್