'ಬಿಜೆಪಿ ನನಗೆ ಪದ್ಮ ಪ್ರಶಸ್ತಿ ಕೊಡಲ್ಲ ಅಂದ್ಕೊಂಡಿದ್ದೆ, ಆದ್ರೆ ನೀವು ನನ್ನ ಊಹೆ ಸುಳ್ಳು ಮಾಡಿದ್ರಿ' - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Apr 5, 2023, 11:07 PM IST

ಕರ್ನಾಟಕದ ಬೀದರ್‌ನ ಹಿರಿಯ ಬಿದರಿ ಕಲಾವಿದರಾದ ಶಾ ರಶೀದ್ ಅಹಮದ್ ಖಾದ್ರಿ ಅವರಿಗೆ ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಕಾಲ ಮಾತನಾಡಿದ ಖಾದ್ರಿ, '' ಹಿಂದಿನ ಸರ್ಕಾರದ ಅವಧಿಯಲ್ಲೇ ಪದ್ಮ ಪ್ರಶಸ್ತಿ ಸಿಗುತ್ತದೆ ಎಂದು ಭಾವಿಸಿದ್ದೆ. ಆದರೆ ಪ್ರಶಸ್ತಿ ಸಿಗಲಿಲ್ಲ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಈ ಪ್ರಶಸ್ತಿ ಸಿಗಲಿದೆ ಎಂಬ ನಿರೀಕ್ಷೆಯೇ ಇರಲಿಲ್ಲ. ಆದರೆ ನೀವು ನನ್ನನ್ನು ಆಯ್ಕೆ ಮಾಡುವ ಮೂಲಕ ನನ್ನ ಊಹೆ ತಪ್ಪೆಂದು ಸಾಬೀತು ಪಡಿಸಿದ್ದೀರಿ. ನಿಮಗೆ ಧನ್ಯವಾದಗಳು'' ಎಂದರು.

1955ರಲ್ಲಿ ಜನಿಸಿರುವ ಖಾದ್ರಿ  ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಶ್ರೇಷ್ಠ ಬಿದರಿ ಕಲಾವಿದರಾಗಿರುವ ಇವರು ತಮ್ಮ ಪೂರ್ವಜರ ಕಾಲದಿಂದಲೂ ಈ ಕರಕುಶಲತೆ ಮುಂದುವರೆಸಿಕೊಂಡು ಬಂದಿದ್ದಾರೆ. ಇವರಿಗೆ ಶಿಲ್ಪಗುರು ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯ ಉತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜೊತೆಗೆ 2015ರಲ್ಲಿ ರಾಷ್ಟ್ರಪತಿ ಪ್ರಶಸ್ತಿಗಳೂ ಲಭಿಸಿವೆ. ದೇಶ, ವಿದೇಶಗಳಲ್ಲಿ ಬಿದರಿ ಕಲೆಯನ್ನು ಪರಿಚಯಿಸಿದ್ದಾರೆ.

ಇದನ್ನೂ ಓದಿ : ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಂಭ್ರಮದ ತೆಪ್ಪೋತ್ಸವ.. ಬಾಣ ಬಿರುಸುಗಳ ಚಿತ್ತಾರದ ಮೆರುಗು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.