ಭಾರತ ಮತ್ತು ಅಮೆರಿಕ ಸಂಬಂಧ ಆಕಾಶದಂತೆ ಮಿತಿಯೇ ಇಲ್ಲ: ಜಂಟಿ ಅಧಿವೇಶನದಲ್ಲಿ ಕವಿತೆ ಓದಿ ಮಂತ್ರ ಮುಗ್ದಗೊಳಿಸಿದ ಮೋದಿ
🎬 Watch Now: Feature Video
ವಾಷಿಂಗ್ಟನ್ ಡಿಸಿ (ಅಮೆರಿಕ): ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಆಕಾಶದಂತೆ ಮಿತಿಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಎರಡು ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಪ್ರಮುಖವಾಗಿ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ಹೊಸ ಅಧ್ಯಯನ ಸೇರ್ಪಡೆಗೊಂಡಿದೆ ಎಂದು ಹೇಳಿದರು.
ಬಾಹ್ಯಾಕಾಶ ಸಹಕಾರದಲ್ಲೂ ಭಾರತವು ಸುದೀರ್ಘ ಬೆಳವಣಿಗೆ ಕಂಡಿದೆ. ಭಾರತ ಮತ್ತು ಅಮೆರಿಕ ಕೃತಕ ಬುದ್ಧಿಮತ್ತೆ (ಎಐ) ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಸಹಕರಿಸುವ ಮೂಲಕ ಬಲವಾದ ಭವಿಷ್ಯದ ಸಂಬಂಧವನ್ನು ರಚಿಸುವುದರ ಜೊತೆಗೆ ಇದು ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದೆ. "ಅಮೆರಿಕ ಮತ್ತು ಭಾರತದ ನಡುವಿನ ಆರ್ಟೆಮಿಸ್ ಒಪ್ಪಂದವು ಬಾಹ್ಯಾಕಾಶ ಪರಿಶೋಧನೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದು, ಇದು ಆಕಾಶಕ್ಕೆ ಮಿತಿಯಿಲ್ಲ ಎಂಬುದನ್ನ ಸಾಬೀತುಪಡಿಸುತ್ತದೆ."ಬಾಹ್ಯಾಕಾಶ ಸಹಕಾರದಲ್ಲಿ ಭಾರತವು ಸುದೀರ್ಘ ಜಿಗಿತ ಕಂಡಿದೆ"ಎಂದು ಪ್ರಧಾನಿ ಬಣ್ಣಿಸಿದರು
"ನಾವು ಹಳೆಯ ಖರೀದಿದಾರ - ಮಾರಾಟಗಾರರ ಸಂಬಂಧವನ್ನು ತೊರೆದು ತಂತ್ರಜ್ಞಾನದ ವರ್ಗಾವಣೆ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಮೋದಿ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ತಮ್ಮ ಕವಿತೆಯನ್ನು ವಾಚಿಸಿದರು. "ಆಕಾಶದಲ್ಲಿ ತಲೆಯೆತ್ತಿ, ದಟ್ಟ ಮೋಡಗಳನ್ನು ಭೇದಿಸಿ, ಬೆಳಕಿನ ಪ್ರತಿಜ್ಞೆ ಮಾಡಿ, ಸೂರ್ಯ ಉದಯಿಸಿದ್ದಾನೆ. ದೃಢಸಂಕಲ್ಪದಿಂದ ನಡೆಯುತ್ತಾ ಪ್ರತಿ ಕಷ್ಟವನ್ನೂ ದಾಟಿ ಕತ್ತಲನ್ನು ಹೋಗಲಾಡಿಸಲು ಸೂರ್ಯ ಉದಯಿಸಿದ್ದಾನೆ" ಎಂದು ಹೇಳುವ ಮೂಲಕ ನೆರೆದಿದ್ದವರನ್ನು ಮಂತ್ರ ಮುಗ್ದಗೊಳಿಸಿದರು.
ಇದನ್ನು ಓದಿ: ಪ್ರಧಾನಿ ಮೋದಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಕಾರ್ಪೊರೇಟ್ ನಾಯಕರು ಸೇರಿ 400 ಅತಿಥಿಗಳು ಭಾಗಿ