ನಟಿ ಲೀಲಾವತಿ ನಿಧನ: ಮನೆಯೊಡತಿಗಾಗಿ ಆಹಾರ ಬಿಟ್ಟು ಕಾಯ್ದು ಕುಳಿತ ಸಾಕು ನಾಯಿ
🎬 Watch Now: Feature Video
ನೆಲಮಂಗಲ: ಹಿರಿಯ ನಟಿ ಲೀಲಾವತಿ ನಿಧನದ ನಂತರ, ಅವರ ಅಚ್ಚುಮೆಚ್ಚಿನ ನಾಯಿ ಬ್ಲ್ಯಾಕಿ (ನಿನ್ಬೆ) ಮೌನವಾಗಿ ಕುಳಿತುಕೊಂಡಿದೆ. ಹೌದು, ನಟಿ ಲೀಲಾವತಿ ಅವರ ಭಾವಚಿತ್ರದ ಎದುರು ಕುಳಿತುಕೊಂಡು, ಅವರ ಬರುವಿಕೆಗಾಗಿ ಕಾಯುತ್ತಿದೆ.
ಮೂಕಪ್ರಾಣಿಗಳನ್ನು ಕಂಡರೆ ನಟಿ ಲೀಲಾವತಿ ಅವರಿಗೆ ಅಚ್ಚುಮೆಚ್ಚು. ಅವರ ಮನೆಯಲ್ಲಿ 7 ರಿಂದ 8 ನಾಯಿಗಳನ್ನು ಸಾಕಲಾಗಿದೆ. ಅವರ ಅಚ್ಚುಮೆಚ್ಚಿನ ನಾಯಿ ಬ್ಲ್ಯಾಕಿ, ಸದಾ ಲೀಲಾವತಿ ಅಮ್ಮನವರನ್ನು ತುಂಬಾ ಹಚ್ಚಿಕೊಂಡಿದೆ. ನಿನ್ನೆ ಅಸ್ವಸ್ಥಗೊಂಡ ಲೀಲಾವತಿ ಅವರನ್ನ ನೆಲಮಂಗಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತು. ನಂತರ ಲೀಲಾವತಿ ಮನೆಗೆ ಬಾರದೇ ಇರುವುದು ಬ್ಲ್ಯಾಕಿಯು ದುಃಖ ವ್ಯಕ್ತಪಡಿಸುತ್ತಿದೆ. ಲೀಲಾವತಿ ಅವರ ಫೋಟೋ ಮುಂದೆ ಮೌನವಾಗಿ ಕುಳಿತಿದೆ. ಆಹಾರ ಬಿಟ್ಟು ಮೂಕರೋಧನೆ ಪಡುತ್ತಿದೆ. ಕೆಲಸದವರು ಆಹಾರ ಕೊಟ್ಟರು ತೆಗೆದುಕೊಳ್ಳುತ್ತಿಲ್ಲ.
ಓದಿ: ಅನಾರೋಗ್ಯದ ಮಧ್ಯೆ 'ಕನ್ನಡ' ಫಿಲ್ಮ್ ಚೇಂಬರ್ನಲ್ಲಿ ಧ್ವಜಾರೋಹಣ ನೆರವೇರಿಸಿದ ನಟಿ ಲೀಲಾವತಿ
ಪುತ್ರ ವಿನೋದ್ ರಾಜ್ ಮಾತು: ''ಕ್ಷಣಕ್ಷಣಕ್ಕೂ ಬೇಸರ ಹೆಚ್ಚಾಗ್ತಿದೆ. ಸ್ವಲ್ಪ ಸಮಯದ ಹಿಂದೆ ಅಮ್ಮ ಜೊತೆಗಿದ್ದರು. ಕ್ಷಣಗಳು ಉರುಳುತ್ತಿದ್ದಂತೆ ಅಮ್ಮ ನಮ್ಮ ಜೊತೆಗೆ ಇರೋದಿಲ್ಲ ಎನ್ನುವ ಬೇಸರ ಜಾಸ್ತಿಯಾಗ್ತಿದೆ. ನಿನ್ನೆ ಬೆಳಗ್ಗೆ ಮಾತಾಡಿದ್ರು, ಚೆನ್ನಾಗಿದ್ರು. ಆದರೆ ಕೈ ನೋಯ್ತಿದೆ ಅಂತಾ ಹೇಳಿದ್ರು. ನನ್ನ ಜೊತೆಗೆ ಇದ್ರು, ಇಷ್ಟು ವರ್ಷ ಅವರ ಜೊತೆಗೆ ಖುಷಿಯಾಗಿ ಕಾಲ ಕಳೆದಿದ್ದೇನೆ. ಅವರ ಪ್ರೀತಿಯ ನಾಯಿ 'ನಿನ್ಬೆ' ಅಮ್ಮ ಅಂತಿತ್ತು. ಅಮ್ಮನಿಲ್ಲದ ಮನೆಯಲ್ಲಿ ಶ್ವಾನ ಕಣ್ಣೀರು ಹಾಕ್ತಿದೆ. ಅಮ್ಮನಿಗೂ ಈ ಶ್ವಾನ ಎಂದರೆ ಬಹಳ ಪ್ರೀತಿ. ಅವರ ನೆನಪಿನಲ್ಲಿ ಸದಾ ನಾನು ಇರುತ್ತೇನೆ. ಅವರ ಕೆಲ ಕನಸುಗಳಿದ್ವು ಅದನ್ನು ನನಸಾಗಿಸುತ್ತೇನೆ'' ಎಂದು ಪುತ್ರ ವಿನೋದ್ ರಾಜ್ ಹೇಳಿದರು.
ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಪಾರ್ಥಿವ ಶರೀರ: ಅಂತಿಮ ದರ್ಶನಕ್ಕೆ ಹರಿದು ಬಂದ ಅಭಿಮಾನಿಗಳು