'ಕೀರ್ತಿ ಚಕ್ರ' ಹುತಾತ್ಮ ಯೋಧ ಶ್ರವಣ ಕಶ್ಯಪ್ ಪತಿಮೆ ನಿರ್ಮಿಸಿ ಪೂಜೆ: ವಿಡಿಯೋ

🎬 Watch Now: Feature Video

thumbnail

By

Published : May 16, 2023, 1:30 PM IST

ಬಸ್ತಾರ್(ಛತ್ತೀಸ್​ಗಢ): ನಕ್ಸಲ್​ ಕಾರ್ಯಾಚರಣೆಯ ವೇಳೆ ಹುತಾತ್ಮರಾಗಿದ್ದ ವೀರಯೋಧ ಶ್ರವಣ ಕಶ್ಯಪ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಯಿತು. ಅವರ ಹುಟ್ಟೂರಾದ ಛತ್ತೀಸ್​ಗಢದ ಬಸ್ತಾರ್​ ಜಿಲ್ಲೆಯ ಬನಿಯಾಗಾಂವ್‌ನಲ್ಲಿ ಅವರ ಪ್ರತಿಮೆ ನಿರ್ಮಿಸಿರುವ ಜನರು, ಪೂಜೆ ಸಲ್ಲಿಸುತ್ತಿದ್ದಾರೆ.

ಏಪ್ರಿಲ್ 2021 ರಲ್ಲಿ ಶ್ರವಣ ಕಶ್ಯಪ್ ಅವರು ನಕ್ಸಲ್​ ಕಾರ್ಯಾಚರಣೆಯ ವೇಳೆ ಹುತಾತ್ಮರಾಗಿದ್ದರು. ಮೇ 9 ರಂದು ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದರು.

ಬನಿಯಾಗಾಂವ್‌ನ ಈ ವೀರ ಹುತಾತ್ಮ ಯೋಧ ಇಲ್ಲಿನ ಜನರಿಗೆ ಮಾದರಿಯಾಗಿದ್ದಾರೆ. ಗ್ರಾಮದ ಜನರಿಗೆ ಶ್ರವಣ ಕಶ್ಯಪ್ ಬಗ್ಗೆ ಹೆಮ್ಮೆ ಇದೆ. ಈ ಕಾರಣಕ್ಕಾಗಿ ಅವರು ಊರಿನ ಪ್ರತ್ಯೇಕ ಸ್ಥಳದಲ್ಲಿ ಸಮವಸ್ತ್ರದಲ್ಲಿರುವ ಶ್ರವಣ್​ ಕಶ್ಯಪ್​ ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅಲ್ಲದೇ, ಅವರ ವಿಗ್ರಹಕ್ಕೆ ಪೂಜೆಯನ್ನೂ ಸಲ್ಲಿಸುತ್ತಿದ್ದಾರೆ.

ಶ್ರವಣ್ ಕಶ್ಯಪ್ ಅವರ ಪತ್ನಿ ದೂತಿಕಾ ಕಶ್ಯಪ್ ಅವರು ಪೂಜೆಯಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದರು. ಇದೇ ವೇಳೆ, ಬಸ್ತಾರ್ ಜಿಲ್ಲೆಯ ಐಜಿ ಸುಂದರರಾಜ್ ಮಾತನಾಡಿ, ಹುತಾತ್ಮ ಶ್ರವಣ ಕಶ್ಯಪ್ ಬಗ್ಗೆ ಹೆಮ್ಮೆ ಇದೆ. ಬಸ್ತಾರ್‌ನ ಈ ವೀರ ಯೋಧನ ಬಗ್ಗೆ ದೇಶವೇ ಹೆಮ್ಮೆಪಡುತ್ತಿದೆ. ನಕ್ಸಲೀಯರ ವಿರುದ್ಧ ಹೋರಾಡುವಾಗ ದೇಶಕ್ಕಾಗಿ ಪರಮ ತ್ಯಾಗ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಈ ವೀರ ಸೈನಿಕನ ಜೀವನ ಚರಿತ್ರೆ ಸ್ಫೂರ್ತಿ ಎಂದು ಹೇಳಿದರು.

ಓದಿ: ರೋಜ್‌ಗಾರ್ ಮೇಳ: 71 ಸಾವಿರ ಮಂದಿಗೆ 'ನೇಮಕಾತಿ ಪತ್ರ' ವಿತರಿಸಿದ ಪ್ರಧಾನಿ ಮೋದಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.